‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ

Public TV
1 Min Read
shraddha kapoor 3

‘ಸ್ತ್ರೀ 2′ (Stree 2) ಸಿನಿಮಾದ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್‌ಗೆ (Shraddha Kapoor) ಡಿಮ್ಯಾಂಡ್ ಹೆಚ್ಚಾಗಿದೆ. ಹಿಂದಿ ಮಾತ್ರವಲ್ಲ ಸೌತ್‌ನಿಂದಲೂ ‘ಆಶಿಕಿ 2’  ನಟಿಗೆ ಬುಲಾವ್ ಬರುತ್ತಿದೆ. ಹೃತಿಕ್ ರೋಷನ್ (Hrithik Roshan) ಮುಂದಿನ ಸಿನಿಮಾಗೆ ಶ್ರದ್ಧಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ:ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ ಆದ ಡಾಲಿ

hrithik roshan

ಸಕ್ಸಸ್‌ಫುಲ್ ಸರಣಿ ‘ಕ್ರಿಶ್ 4’ಗೆ (Krrish 4) ಸಿನಿಮಾ ಬರುವ ಬಗ್ಗೆ ಈಗಾಗಲೇ ಅನೌನ್ಸ್ ಆಗಿದೆ. ಹೃತಿಕ್ ರೋಷನ್ ಜೊತೆ ‘ಸ್ತ್ರೀ 2’ ಚಿತ್ರದ ನಾಯಕಿ ಶ್ರದ್ಧಾ ನಟಿಸಿದರೆ ಸೂಕ್ತ ಎಂದು ಚಿತ್ರತಂಡ ನಟಿಯನ್ನು ಸಂಪರ್ಕಿಸಿದೆ. ಶ್ರದ್ಧಾ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎಂಬುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ. ಈ ಕುರಿತು ಚಿತ್ರತಂಡದಿಂದಲೇ ಅಫಿಷಿಯಲ್ ಅನೌನ್ಸ್‌ಮೆಂಟ್‌ ಆಗುವವರೆಗೂ ಕಾಯಬೇಕಿದೆ.

shraddha kapoor 1 1

ಇತ್ತೀಚೆಗಷ್ಟೇ ಶ್ರದ್ಧಾ ಸಂದರ್ಶನವೊಂದರಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಎಂಬುದಕ್ಕಿಂತ ನನಗೆ ಕಥೆ ಮತ್ತು ನನ್ನ ಪಾತ್ರದ ಪ್ರಾಮುಖ್ಯತೆ ಮುಖ್ಯ ಎಂದು ಹೇಳಿಕೆ ನೀಡಿದ್ದರು. ನಟಿಸುವ ಪಾತ್ರದಲ್ಲಿ ನಟನೆಗೆ ಸ್ಕೋಪ್ ಇದೆ ಅಂದರೆ ಆ ಸಿನಿಮಾದಲ್ಲಿ ನಟಿಸಲು ಸಿದ್ಧ ಎಂದಿದ್ದರು. ಈಗ ಹೃತಿಕ್ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿರೋದಕ್ಕೆ ನಟಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ಮೊದಲ ಬಾರಿಗೆ ಜೋಡಿಯಾಗುತ್ತಿರುವ ಹೃತಿಕ್‌ ಮತ್ತು ಶ್ರದ್ಧಾ ಸಿನಿಮಾ ನೋಡಲು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

ಇನ್ನೂ ರಾಜ್‌ಕುಮಾರ್ ರಾವ್ ಜೊತೆಗಿನ ‘ಸ್ತ್ರೀ 2’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 300 ಕೋಟಿ ರೂ. ಗಳಿಕೆ ಮಾಡುವತ್ತ ಸಿನಿಮಾ ಮುನ್ನುಗ್ಗುತ್ತಿದೆ. ಈ ಚಿತ್ರದ ನಟಿಯ ಅದೃಷ್ಟ ಬದಲಾಗಿದೆ.

Share This Article