ತಿರುವನಂತಪುರಂ: ಕೇರಳದಲ್ಲಿ(Kerala) ಬೀದಿ ನಾಯಿಗಳ(Stray Dog) ಹಾವಳಿ ಹೆಚ್ಚುತ್ತಿರುವುದರೊಂದಿಗೆ ಅವುಗಳಿಂದ ಜನರ ಮೇಲೆ ದಾಳಿ ನಡೆಯುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿನ್ನೆಲೆ ವ್ಯಕ್ತಿಯೊಬ್ಬರು ಮಕ್ಕಳ ಮೇಲೆ ನಾಯಿಗಳಿಂದ ಯಾವುದೇ ದಾಳಿಯಾಗಬಾರದು ಎಂಬ ಕಾರಣಕ್ಕೆ ಕೋವಿ(Gun) ಹಿಡಿದು ಅವರನ್ನು ಮದರಸಾಗೆ ಕಳುಹಿಸಿದ ಘಟನೆ ನಡೆದಿದೆ.
ಕಾಸರಗೋಡಿನ(Kasaragod) ವ್ಯಕ್ತಿ ಸಮೀರ್ ನಾಯಿಗಳಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ಕಾರಣಕ್ಕೆ ಕೋವಿ ಹಿಡಿದು, ಮಕ್ಕಳನ್ನು ಮದರಸಾಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಪಾಳು ಬಾವಿಗೆ ಎಸೆದಿದ್ದ ಹಸುಗೂಸಿಗೆ ಹಾಲುಣಿಸಿ ವಾತ್ಸಲ್ಯ ಮೆರೆದ ಗ್ರಾಮದ ಮಹಿಳೆ
Advertisement
Advertisement
ಬೀದಿ ನಾಯಿಗಳ ಕಾಟದಿಂದಾಗಿ ಜನರು ರಸ್ತೆಗಳಲ್ಲಿ ಓಡಾಡಲು ಕಷ್ಟಪಡುವಂತಾಗಿದೆ. ಕಾಸರಗೋಡಿನ ಬೇಕಲ ಪ್ರದೇಶದಲ್ಲಿಯೇ ಕಳೆದ 1 ವಾರದಲ್ಲಿ 10 ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಕೇರಳದಲ್ಲಿ ಈ ವರ್ಷ ಬೀದಿ ನಾಯಿ ದಾಳಿ ಪ್ರಕರಣಗಳು ಏರಿಕೆಯಾಗಿವೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ