ಬೆಂಗಳೂರು: ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಭದ್ರತಾ ಲೋಪವಾಗಿದೆ. ಏರ್‌ಪೋರ್ಟ್‌ನ (Airport) ರನ್‌ವೇಯಲ್ಲಿ ಬೀದಿನಾಯಿಗಳು (Stray Dog) ಓಡಾಡಿವೆ.
ಎರಡು ಬೀದಿ ನಾಯಿಗಳು ಟರ್ಮಿನಲ್ 2ರ ಹೊಸ ರನ್‌ವೇಯಲ್ಲಿ ಓಡಾಡಿವೆ. ಅಷ್ಟೇ ಅಲ್ಲದೇ ವಿಮಾನಗಳ ಬಳಿಯೂ ಹೋಗಿ ಸುತ್ತಾಡಿವೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ರನ್ ವೇಯಲ್ಲಿ ವಿಮಾನಗಳಿರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ದೋಷ; ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟ ಸ್ಥಗಿತ
ಬೀದಿ ನಾಯಿಗಳನ್ನು ಕಂಡು ಕೂಡಲೇ ಅಲರ್ಟ್ ಆದ ವಿಮಾನ ನಿಲ್ದಾಣದ ಸಿಬ್ಬಂದಿ ಹರಸಾಹಸ ಪಟ್ಟು ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್ ಬಲಿ ಪಡೆದ ವಿಮಾನ ಅಪಘಾತದ ತನಿಖೆ ಆರಂಭಿಸಿದ ಸಿಐಡಿ

