ಚಂಡೀಗಢ: ಬೀದಿನಾಯಿಯೊಂದು ಮೂರು ದಿನದ ಗಂಡು ಮಗುವನ್ನು ಆಸ್ಪತ್ರೆಯಿಂದ ಎತ್ತುಕೊಂಡು ಹೋಗಿ ಕಚ್ಚಿ ಕೊಂದಿರುವ ಘಟನೆಯೊಂದು ಹರಿಯಾಣದ ಪಾಣಿಪತ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಪಾಣಿಪತ್‍ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮಗು ವೃದ್ಧೆ ಪಕ್ಕ ನೆಲದ ಮೇಲೆ ಮಲಗಿಕೊಂಡಿತ್ತು. ಈ ವೇಳೆ ಆಸ್ಪತ್ರೆ ಒಳಗೆ ಬಂದ ಬೀದಿನಾಯಿ ನೆಲದ ಮೇಲೆ ಮಲಗಿಕೊಂಡಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕಚ್ಚಿ ಕೊಂದಿದೆ. ಇದನ್ನೂ ಓದಿ: ಪತಿ ಜೊತೆ ಸೇರಿ 7,894 ಕೋಟಿ ರೂ. ಸೋಲಾರ್ ಹಗರಣ ಮಾಡಿ ಸಿಕ್ಕಿಬಿದ್ಳು
Advertisement
Advertisement
ನಡೆದಿದ್ದೇನು?
ತಾಯಿಯು ಹಾಸಿಗೆ ಮೇಲೆ ಮಲಗಿಕೊಂಡಿದ್ದಳು. ಆಕೆಯ ಅಮ್ಮ ಮತ್ತು ಚಿಕ್ಕಮ್ಮ ಆಸ್ಪತ್ರೆಯ ಜನರಲ್ ವಾರ್ಡ್‍ನಲ್ಲಿ ಮಲಗಿದ್ದರು. ಮಗುವನ್ನು ಆಕೆಯ ಅಮ್ಮ ತನ್ನ ಜೊತೆ ನೆಲದ ಮೇಲೆ ಮಲಗಿಸಿಕೊಂಡಿದ್ದಳು. ಈ ವೇಳೆ ಆಸ್ಪತ್ರೆಯ ಒಳಗೆ ಬಂದ ನಾಯಿಯು ಮಗುವನ್ನು ಬಾಯಿಂದ ಎತ್ತಿಕೊಂಡು ಹೊರಗೆ ಹೋಗಿ ಕಚ್ಚಿ ಸಾಯಿಸಿದೆ.
Advertisement
Advertisement
ಬೆಳಗಿನ ಜಾವ 2:15ರ ಸುಮಾರಿಗೆ ಮಗುವಿನ ಕುಟುಂಬಸ್ಥರು ಎಚ್ಚರವಾದಾಗ, ಮಗು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ನಂತರ ಆಸ್ಪತ್ರೆ ಸುತ್ತ ಹುಡುಕಿ ಸಿಸಿಟಿವಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಇದನ್ನೂ ಓದಿ: ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ
ಪ್ರಸ್ತುತ ಮಗುವಿನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಪಾಣಿಪತ್‍ನ ಹೃದಯ ಮತ್ತು ಮದರ್ ಕೇರ್ ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಯಾವುದೇ ಆರೋಪಗಳಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಪ್ರತಿಕ್ರಿಯಿಸಿಲ್ಲ.