ಚಂಡಿಗಢ: ಒಂದು ಬಾರಿ ಬೀದಿ ನಾಯಿ (Stray Dog Bite) ಕಚ್ಚಿದರೆ ರಾಜ್ಯ ಸರ್ಕಾರ ಸಂತ್ರಸ್ತ ವ್ಯಕ್ತಿಗೆ ಕನಿಷ್ಟ 10,000 ರೂ. ಪರಿಹಾರ ನೀಡಬೇಕೆಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ (Punjab and Haryana High Court) ಮಹತ್ವದ ಆದೇಶ ಪ್ರಕಟಿಸಿದೆ.
ಬೀದಿ ನಾಯಿ ಅಥವಾ ದನಗಳಂತಹ ಬೀದಿ ಪ್ರಾಣಿಗಳ ದಾಳಿ ಪ್ರಕರಣದ ವೇಳೆ ಪರಿಹಾರ ಪಾವತಿಸುವ ವಿಚಾರದಲ್ಲಿ ಪ್ರಾಥಮಿಕವಾಗಿ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊರಬೇಕು. ಪ್ರತಿ ಹಲ್ಲಿನ ಗುರುತಿಗೆ (Per Teeth Mark) ಕನಿಷ್ಠ 10,000 ರೂ. ಮತ್ತು 0.2 ಸೆಂ.ಮೀ ಗಾಯಕ್ಕೆ ಕನಿಷ್ಠ 20,000 ರೂ. ಪರಿಹಾರ ಧನ ನೀಡಬೇಕೆಂದು ಹೇಳಿದೆ.
Advertisement
Advertisement
ಬಿಡಾಡಿ ಪ್ರಾಣಿಗಳ ದಾಳಿಗೆ ಸಂಬಂಧಿಸಿದ 193 ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ. ಈ ರೀತಿಯ ಪ್ರಕರಣಗಳು ದಾಖಲಾದ ನಂತರ ಏಜೆನ್ಸಿ/ ಖಾಸಗಿ ವ್ಯಕ್ತಿಯಿಂದ ರಾಜ್ಯ ಸರ್ಕಾರ ವಸೂಲಿ ಮಾಡಿ ಸಂತ್ರಸ್ತ ವ್ಯಕ್ತಿಗೆ ಪರಿಹಾರವನ್ನು ಪಾವತಿಸಬೇಕೆಂದು ಸೂಚಿಸಿದೆ. ಇದನ್ನೂ ಓದಿ: ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?
Advertisement
ಪಂಜಾಬ್, ಹರ್ಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಹೈಕೋರ್ಟ್ ಒಂದು ಸಮಿತಿಯನ್ನು ರಚಿಸುವಂತೆ ಸೂಚಿಸಿದೆ. ಈ ಸಮಿತಿ ಹಸು, ಎತ್ತು, ಕತ್ತೆ, ನಾಯಿ, ನೀಲಗಾಯ್, ಎಮ್ಮೆ ಮತ್ತು ಕಾಡು, ಸಾಕುಪ್ರಾಣಿಗಳ ದಾಳಿಯ ಪ್ರಕರಣಗಳಲ್ಲಿ ಪಾವತಿಸಬೇಕಾದ ಪರಿಹಾರವನ್ನು ನಿರ್ಧರಿಸಲಿದೆ.
Advertisement
ಈ ಸಮಿತಿಯು ಸಂಬಂಧಪಟ್ಟ ಜಿಲ್ಲೆಯ ಡೆಪ್ಯೂಟಿ ಕಮಿಷನರ್‌ರನ್ನು ಅದರ ಅಧ್ಯಕ್ಷರನ್ನಾಗಿ ಒಳಗೊಂಡಿರಬೇಕು. ಪೊಲೀಸ್ ಅಧೀಕ್ಷಕರು/ಉಪ ಪೊಲೀಸ್ ಅಧೀಕ್ಷಕರು (ಸಂಚಾರ), ಸಂಬಂಧಪಟ್ಟ ಪ್ರದೇಶದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಜಿಲ್ಲಾ ಸಾರಿಗೆ ಅಧಿಕಾರಿ, ಮುಖ್ಯ ವೈದ್ಯಾಧಿಕಾರಿಯ ಪ್ರತಿನಿಧಿ ಸಮಿತಿಯಲ್ಲಿರಬೇಕೆಂದು ಸೂಚಿಸಿದೆ.