ಧಾರವಾಡ: ಮೃತಪಟ್ಟಿದೆ ಎಂದು ಭಾವಿಸಿ ಒಂದೂವರೆ ವರ್ಷದ ಮಗುವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಉಸಿರಾಡಿರುವ ವಿಚಿತ್ರ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಬಸವರಾಜ್ ಎಂಬವರ ಮಗ ಒಂದೂವರೆ ವರ್ಷದ ಆಕಾಶ್ ಮೃತಪಟ್ಟಿರುವುದಾಗಿ ಹುಬ್ಬಳ್ಳಿ ಕಿಮ್ಸ್ (KIMS Hospital Hubli) ವೈದ್ಯರು ತಿಳಿಸಿದ್ದರು. ಅನಾರೋಗ್ಯದ ಕಾರಣ ಆಗಸ್ಟ್ 13 ರಂದು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ತೆಗೆದರೆ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು.
ಆದರೆ ಗುರುವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಮಗುವಿನ ಪೋಷಕರು ಮಗುವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್ – ಇಂದಿನಿಂದ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ
ಅಂತ್ಯಕ್ರಿಯೆ ಮಾಡುವ ಸಂದರ್ಭ ಬಾಯಿಗೆ ನೀರು ಹಾಕಿದ್ದೇ ತಡ ಮಗು ಜೀವಂತವಾಗಿದೆ. ಮಗು ಕೈಕಾಲು ಅಲುಗಾಡಿಸಿದ್ದಕ್ಕೆ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಆಪರೇಷನ್ ಬಿಪಿಎಲ್ ಕಾರ್ಡ್- ಸತ್ತವರ ಹೆಸ್ರಲ್ಲೂ ಅಕ್ಕಿ ಪಡೆಯುತ್ತಿದ್ದ ಕುಟುಂಬಸ್ಥರು
Web Stories