ಕೊಪ್ಪಳ: ಜಿಲ್ಲೆಯ ತಾಲೂಕಿನ ಶಿವಪುರ ಗ್ರಾಮದಲ್ಲಿ ವಿಚಿತ್ರ ಪ್ರಾಣಿ ಕಾಣಿಸಿಕೊಂಡಿದ್ದು, ಸುವಾಸನೆ ಸೂಸುವ ಪುನಗಬೆಕ್ಕು ಅಂತ ಹೇಳಲಾಗುತ್ತಿದೆ.
ಗಾಯಗೊಂಡ ಸ್ಥಿತಿಯಲ್ಲಿಯಲ್ಲಿರುವ ಈ ಪ್ರಾಣಿಯನ್ನು ಮಾರ್ಕಂಡೆಪ್ಪ ಎಂಬವರು ರಕ್ಷಣೆ ಮಾಡಿದ್ದು, ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಲು ಗ್ರಾಮಸ್ಥರು ಪ್ರಯತ್ನಿಸಿದ್ದಾರೆ. ಆದರೆ ಯಾರೊಬ್ಬರೂ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೊನೆಗೆ ಮಾರ್ಕಂಡೆಪ್ಪ ಈ ಕುರಿತು ಫೇಸ್‍ಬುಕ್ ಹಾಗೂ ವಾಟ್ಸಪ್ ಗಳಲ್ಲಿ ತಮಗಾದ ಅನುಭವ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಶಿವಪುರದ ಹೊಲವೊಂದರಿಂದ ಬಿಲದೊಳಗೆ ಹೋಗಲು ಯತ್ನಿಸುವಾಗ ಈ ಪ್ರಾಣಿಯನ್ನು ನಾಯಿ ಅಟ್ಟಿಸಿಕೊಂಡು ಹೋಗಿ ಗಾಯಗೊಳಿಸಿವೆ. ನಾಯಿಯಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಕಂಬ ಏರಲು ಯತ್ನಿಸಿದೆ. ಆಗ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದೆ ಎಂದು ತಿಳಿದು ಬಂದಿದೆ.
Advertisement
ಸಾಮಾಜಿಕ ಜಾಲತಾಣಗಲ್ಲಿ ಮಾರ್ಕಂಡೆಪ್ಪ ಅವರು ಮಾಡಿದ ಮನವಿಯನ್ನು ಗಮನಿಸಿದ ಪ್ರಾಣಿಪ್ರಿಯ ಸುಜಿತ್ ಶೆಟ್ಟರ್ ಇದು ಪುನಗಬೆಕ್ಕು ಇದರ ಮೂತ್ರದಿಂದ ಸುಗಂಧ ದ್ರವ್ಯ ತಯಾರು ಮಾಡುತ್ತಾರೆ ಅಂತ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv