ಕೀವ್: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ನಿಂದ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಎಸ್ಕೇಪ್ ಆಗಿದ್ದಾರೆ.
ಆರ್ಯ ಆಲ್ಡ್ರಿನ್ ಎಸ್ಕೇಪ್ ಆಗಿರುವ ವಿದ್ಯಾರ್ಥಿನಿ. ಈಕೆ ತನ್ನ ಸಾಕು ನಾಯಿಯನ್ನು ತಬ್ಬಿಕೊಂಡು ವಾಹನದಲ್ಲಿ ಕುಳಿತಿರುವ ಘೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋ ಜೊತೆಗೆ, ಆರ್ಯ ಯುದ್ಧ ಭೂಮಿಯಿಂದ ಸಾಕು ನಾಯಿಯನ್ನು ರಕ್ಷಿಸಿದ್ದಾರೆ. ಕೇರಳಕ್ಕೆ ಬಂದಿದ್ದಾರೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಕೀವ್‍ನಲ್ಲಿ ರಷ್ಯಾ ರಾಕೆಟ್ ದಾಳಿಗೆ 70 ಉಕ್ರೇನ್ ಸೈನಿಕರು ಬಲಿ
Advertisement
Advertisement
ಸಾಕು ಪ್ರಾಣಿಯನ್ನು ಉಳಿಸಲು ಆರ್ಯ ಮಾಡಿದ ಪ್ರಯತ್ನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತನ್ನ ಸಾಕುಪ್ರಾಣಿಯನ್ನು ಉಳಿಸಲು ಆರ್ಯ ಮಾಡಿದ ಪ್ರಯತ್ನಗಳನ್ನು ಬಳಕೆದಾರರು ಪ್ರಶಂಸಿಸಿದ್ದಾರೆ. ʻಉಕ್ರೇನ್ ಅಧ್ಯಕ್ಷರು ತಮ್ಮ ನಾಗರಿಕರನ್ನು ಬಿಟ್ಟು ಓಡಿಹೋಗಲಿಲ್ಲ. ಹಾಗೆಯೇ ವಿದ್ಯಾರ್ಥಿನಿಯೂ ತನ್ನ ನಾಯಿಯನ್ನು ಯುದ್ಧ ವಲಯದಲ್ಲಿ ಬಿಟ್ಟು ಓಡಿ ಹೋಗಲಿಲ್ಲʼ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
Advertisement
Arya rescued her dog too from the war and brought the dog with her all the way to Kerala ❤️#UkraineRussiaWar pic.twitter.com/DVTvSDnkS0
— Comrade Mahabali (@mallucomrade) February 28, 2022
Advertisement
ಇದು ತುಂಬಾ ಹೃದಯ ಸ್ಪರ್ಶಿಯಾಗಿದೆ. ಅಂತಹ ಕರುಣಾಮಯಿಗಳನ್ನು ದೇವರು ಆಶೀರ್ವದಿಸಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ
ಆರ್ಯ, ಉಕ್ರೇನ್‌ನ ರಾಷ್ಟ್ರೀಯ ಪಿರಗಾವ್ ಮೆಮೋರಿಯಲ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ಕೇರಳದ ಇಡುಕ್ಕಿ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವಕುಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
https://twitter.com/kalidas_2k20/status/1498249132846170113?ref_src=twsrc%5Etfw%7Ctwcamp%5Etweetembed%7Ctwterm%5E1498249132846170113%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fworld-news%2Findian-student-manages-to-rescue-pet-dog-brings-it-to-kerala-2796341
ಆರ್ಯ, ವಂಡಿಪೆರಿಯಾರ್ ಮೂಲದವರು. ಯುದ್ಧ ನಡೆಯುತ್ತಿರುವ ಉಕ್ರೇನ್‌ನಿಂದ ತವರು ಭಾರತಕ್ಕೆ ಮರಳಿದ್ದಾರೆ. ಈ ಜಗತ್ತು ಪ್ರೀತಿಯ ಮೂಲಕ ಬೆಳವಣಿಗೆಯನ್ನು ಬಯಸುತ್ತದೆ ಎಂದು ಕೇರಳ ಶಿಕ್ಷಣ ಸಚಿವ ಶಿವಕುಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು
ರಷ್ಯಾ ಕಳೆದ ವಾರ ಉಕ್ರೇನ್ ಮೇಲೆ ಯುದ್ಧ ಸಾರಿದೆ. ಇದರಿಂದಾಗಿ ಇಲ್ಲಿನ ನಾಗರಿಕರು ಯುದ್ಧದ ಭೀತಿಯಿಂದಾಗಿ ಆತಂಕಗೊಂಡಿದ್ದಾರೆ. ಭಾರತ ಸೇರಿದಂತೆ ಅನೇಕ ದೇಶಗಳ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಉಕ್ರೇನ್ ತೊರೆಯುತ್ತಿದ್ದಾರೆ.