ಕೆಜಿಎಫ್ 2 ಸಿನಿಮಾದ ಗೆಲುವಿನ ಖುಷಿಯಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ , ತಮ್ಮ ಚೊಚ್ಚಲು ನಿರ್ದೇಶನದ ತೆಲುಗಿನ ‘ಸಲಾರ್’ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಾರದಿಂದಲೇ ಸಲಾರ್ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಇದಕ್ಕೂ ಮುನ್ನ ಚಿತ್ರದ ಕಥೆಯನ್ನು ಸ್ವತಃ ಚಿತ್ರತಂಡವೇ ಸೋರಿಕೆ ಮಾಡಿದೆ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
Advertisement
ಸಲಾರ್ ಸಿನಿಮಾದ ಕತೆಯ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಯಾಕೆಂದರೆ, ಈ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರಿಮೇಕ್ ಎಂದು ಹೇಳಲಾಗಿತ್ತು. ತಮ್ಮ ನಿರ್ದೇಶನದ ಉಗ್ರಂ ಸಿನಿಮಾವನ್ನು ತಾವೇ ತೆಲುಗಿನಲ್ಲಿ ಸಲಾರ್ ಹೆಸರಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ ಎಂದೂ ಸುದ್ದಿ ಆಗಿತ್ತು. ಆನಂತರ ಈ ಕುರಿತು ಸ್ವತಃ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದರು. ಸಲಾರ್ ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಸಿನಿಮಾದ ಕಥೆಯ ಬಗ್ಗೆ ಸಣ್ಣದೊಂದು ಸುಳಿವು ಸಿಕ್ಕಿದೆ.
Advertisement
Advertisement
ಇಂದು ಸಲಾರ್ ಸಿನಿಮಾದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಪೋಸ್ಟರ್ ನಲ್ಲಿ ಕೆಜಿಎಫ್ 2 ನೆನಪಿಸುವಂತಹ ಡೈಲಾಗ್ ವೊಂದನ್ನು ಬಳಸಿಕೊಳ್ಳಲಾಗಿದೆ. ಕೆಜಿಎಫ್ 2 ಸಿನಿಮಾ ಅಂದಾಕ್ಷಣ ತಕ್ಷಣವೇ ನೆನಪಿಗೆ ಬರುವ ಡೈಲಾಗ್ ‘ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್..’ ಈ ಡೈಲಾಗ್ ಅನ್ನು ಸಲಾರ್ ಸಿನಿಮಾದಲ್ಲೂ ಬಳಸಿಕೊಂಡಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್ಫ್ರೆಂಡ್ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ
Advertisement
ಇಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟರ್ ನಲ್ಲಿ ‘ದಿ ಮೋಸ್ಟ್ ವೈಲೆಂಟ್ ಮೆನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆಂಟ್’ ಎಂದು ವಿಶೇಷ ಬರಹವನ್ನು ಹಾಕಿದ್ದಾರೆ. ಹಾಗಾಗಿ ಸಲಾರ್ ಕೂಡ ಮೋಸ್ಟ್ ವೈಲೆಂಟ್ ಆಗಿಯೇ ಇರಲಿದೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಈ ಮೂಲಕ ವೈಲೆಂಟ್ ಪದವು ಅಷ್ಟು ಬೇಗ ಪ್ರಶಾಂತ್ ನೀಲ್ ಅವರಿಂದ ದೂರ ಹೋಗದು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.