ಕನ್ನಡ ಚಿತ್ರರಂಗದ ಡಾರ್ಲಿಂಗ್ (Darling Krishna), ಇಂಡಸ್ಟ್ರಿಗೆ ಬಂದು ಹದಿಮೂರು ವರ್ಷಗಳು ಕಳೀತಾ ಬಂತು. ಈ ಹದಿಮೂರು ವರ್ಷದಲ್ಲಿ 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಹೊಸ ಬಗೆಯ ಪ್ರಯೋಗ ಮಾಡುತ್ತಾ ಬೆಳ್ಳಿತೆರೆಯನ್ನಾವರಿಸಿಕೊಂಡಿದ್ದಾರೆ. ಸೋಲು, ಗೆಲುವನ್ನ ಸಮನಾಗಿ ಕಾಣುತ್ತಾ ಮುನ್ನಡೆಯುತ್ತಿರುವ ಡಾರ್ಲಿಂಗ್, ಲವ್ ಮಾಕ್ಟೇಲ್ ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದರು. ನಟನಾಗಿ, ನಿರ್ದೇಶಕನಾಗಿ ದಿಗ್ವಿಜಯ ಸಾಧಿಸಿದರು. ಮದರಂಗಿ ಕೃಷ್ಣನಾಗಿದ್ದ ಡಾರ್ಲಿಂಗ್, ಲವ್ ಮಾಕ್ಟೇಲ್ ಆದಿಯಾಗಿ ಪ್ರಮೋಷನ್ ಪಡೆದರು. ಈಗ ಕೌಸಲ್ಯ ಸುಪ್ರಜಾ ರಾಮನಾಗಿ(Kausalya Supraja Rama) ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದು ನನ್ನ ಸಿನಿಮಾ ಕರಿಯರ್ ನ ದಿ ಬೆಸ್ಟ್ ಕಥೆಯುಳ್ಳ ಚಿತ್ರವೆಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
Advertisement
`ಕೌಸಲ್ಯ ಸುಪ್ರಜಾ ರಾಮ’ ಶೀರ್ಷಿಕೆಯಿಂದಲೇ ಕಲಾಭಿಮಾನಿಗಳ ಕಿವಿಯನ್ನರಳಿಸಿದ್ದ ಸಿನಿಮಾ. ಶಶಾಂಕ್ (Shashank) ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೆ ಕುತೂಹಲ ಮೂಡಿತ್ತು. ಡಾರ್ಲಿಂಗ್ ಎಂಟ್ರಿಕೊಟ್ಮೇಲೆ ಆ ಕೂತೂಹಲ ದುಪ್ಪಟ್ಟಾಯ್ತು. ಬದಲಾದ ಆದಿಯ ಲುಕ್ಕು, ಗೆಟಪ್ಪು ಅಭಿಮಾನಿಗಳನ್ನ ಮಾತ್ರವಲ್ಲ ಸಿನಿಮಾಪ್ರೇಮಿಗಳನ್ನೂ ಕಣ್ಣರಳಿಸಿ ನೋಡುವಂತೆ ಮಾಡ್ತು.ಅದ್ಯಾವಾಗ ಆದಿ ಜೊತೆ ಪ್ರಮೋಷನಲ್ ವಿಡಿಯೋಗಳಲ್ಲಿ ನಿಧಿ ಕಾಣಿಸಿಕೊಂಡರೋ ಕೌಸಲ್ಯ ಸುಪ್ರಜಾ ರಾಮನ ಮೇಲೆ ನಿರೀಕ್ಷೆ ದುಪ್ಪಟ್ಟಾಯ್ತು. ಟ್ರೇಲರ್ ಹಾಗೂ ಹಾಡುಗಳನ್ನ ನೋಡಿದ್ಮೇಲೆ ಕುತೂಹಲ ಗರಿಗೆದರಿದೆ. ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡದೇ ಸಿನಿಮಾ ನೋಡುವ ಕಾತುರ ಪ್ರೇಕ್ಷಕರಲ್ಲಿ ಹೆಚ್ಚಿದೆ. ಇದನ್ನೂ ಓದಿ:ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ
Advertisement
Advertisement
ಆದಿ ಮತ್ತು ನಿಧಿನಾ ಒಟ್ಟಿಗೆ ನೋಡಬೇಕೆನ್ನುವ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತವಾಗಲೂ ಇಷ್ಟವಾಗುತ್ತೆ. ವಿಶೇಷ ಅಂದರೆ ಹಿಂದೆಂದೂ ಕಂಡಿರದ ಅವತಾರದಲ್ಲಿ ಕೃಷ್ಣ ಹಾಗೂ ಮಿಲನ ಮಿಂಚಿದ್ದಾರೆ. ಡಾರ್ಲಿಂಗ್‍ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡ್ರೂ ಕೂಡ ಕೃಷ್ಣ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್ ದೃಶ್ಯಗಳು ಚಿತ್ರದಲ್ಲಿರಲಿವೆ. ಈ ಬಗ್ಗೆ ಹೆಚ್ಚು ಡೀಟೈಲ್ಸ್ ಬಿಟ್ಟುಕೊಡದ ಕೃಷ್ಣ, ಇಲ್ಲಿ ವಿಲನ್ನು ನಾನೇ, ಹೀರೋನೂ ನಾನೇ ಅಂತೇಳುವ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದರು. ನನ್ನ ಕ್ಯಾರೆಕ್ಟರ್ ಡೆಪ್ತ್ ಆಗಿದೆ. ವಿವಿಧ ಆಯಾಮಗಳನ್ನೊಳಗೊಂಡ ಪಾತ್ರ ಇದಾಗಿದ್ದು, ನನ್ನ ಕರಿಯರ್ ನ ದಿ ಬೆಸ್ಟ್ ಕಥೆಯುಳ್ಳ ಚಿತ್ರ ಎಂದು ಖುಷಿಯಿಂದ ಹೇಳಿಕೊಂಡರು.
Advertisement
ಕೌಸಲ್ಯ ಸುಪ್ರಜಾ ರಾಮ ಡಾರ್ಲಿಂಗ್ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ ಅಂತೆ. ಹೈಯೆಸ್ಟ್ ರೆಮ್ಯೂನರೇಷನ್ ಪಡೆದಿದ್ದು ಇದೇ ಸಿನಿಮಾಗೆನ್ನುವ ಸುದ್ದಿಯಿದೆ. ಈಗಾಗಲೇ ನಾಲ್ಕೈದು ಭಾರೀ ಸಿನಿಮಾ ನೋಡಿರುವ ಡಾರ್ಲಿಂಗ್, ಈ ಸಿನಿಮಾ ಒಳ್ಳೆ ಸಿನಿಮಾ ಆಗುತ್ತೆ. ಪ್ರೇಕ್ಷಕರ ಮನಸಲ್ಲಿ ದೀರ್ಘಕಾಲ ಉಳಿಯೋ ಚಿತ್ರವಾಗುತ್ತೆ ಎಂದಿದ್ದಾರೆ. ಸ್ಟ್ರಾಂಗ್ ಕಂಟೆಂಟ್ ಮುಂದೆ 200 ಕೋಟಿ 300 ಕೋಟಿ ಲೆಕ್ಕಕ್ಕೆ ಬರಲ್ಲ. ಬಿಲ್ಡಪ್, ಹೈಪ್ ಕೊಡುವುದರ ಕಡೆ ಗಮನ ಕೊಡದೇ, ಸಿನಿಮಾ ಮಾಡುವ ಕಡೆ ಗಮನ ಕೊಡಬೇಕು. ಆಗ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನ ಕಮರ್ಷಿಯಲ್ ವೇನಲ್ಲಿ ಕಟ್ಟಿಕೊಡುವುದಕ್ಕೆ ಸಾಧ್ಯವಾಗುತ್ತೆನ್ನುವ ಮಾತನ್ನಾಡಿದರು. ಇಲ್ಲಿತನಕ ಯಾರೂ ಟಚ್ ಮಾಡದ ಕಥೆಯೊಂದನ್ನ ನಿರ್ದೇಶಕ ಶಶಾಂಕ್ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಹೇಳಿದ್ದು, ಪ್ರತಿಯೊಬ್ಬರಿಗೂ ಈ ಸಿನಿಮಾ ಕನೆಕ್ಟ್ ಆಗುತ್ತೆ ಎಂದರು.
ಅಂದ್ಹಾಗೇ ಈ ಚಿತ್ರ ಮೇಲ್ ಇಗೋ ಕುರಿತಾದದ್ದು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಅನ್ನೋದೇ ಕೌಸಲ್ಯ ಸುಪ್ರಜಾ ರಾಮ ಚಿತ್ರದ ತಿರುಳು. ಡಾಲಿಂಗ್ ಕೃಷ್ಣ, ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್‍ಸ್ಟೋರಿ, ಕೃಷ್ಣಲೀಲಾ ಥರ ಇಲ್ಲೊಂದು ಕ್ಯೂಟ್ ಲವ್‍ಸ್ಟೋರಿಯ ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್ ಕುರಿತಾದ ಅಂಶಗಳನ್ನ ಚಿತ್ರದಲ್ಲಿ ನೋಡಬಹುದು. ತಾಯಿ-ಮಗನ ಸೆಂಟಿಮೆಂಟ್‍ನ ಚಿತ್ರದಲ್ಲಿ ಕಾಣಬಹುದು.
ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎ ನಲ್ಲೂ ಬಿಡುಗಡೆಯಾಗ್ತಿದೆ. ಆರ್ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.
Web Stories