– ಏನಿದು ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ?
ಹೈದರಾಬಾದ್: ಎಲ್ಲರಿಗೂ ತಾನು ಚಂದ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಶ್ರೀಮಂತರು ಅದಕ್ಕೆ ಬೇಕಾದ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತಾರೆ. ಅಂತೆಯೇ ಇಲ್ಲೊಬ್ಬ ಯುವಕ ತನ್ನ ನಗುವಿನ ಮೂಲಕ ಉತ್ತಮವಾಗಿ ಕಾಣಬೇಕು ಎಂಬ ಆಸೆಯಿಂದ ಆಸ್ಪತ್ರೆಗೆ ಹೋಗಿ ಹೆಣವಾಗಿದ್ದಾನೆ.
Advertisement
ಹೌದು. ಮದುವೆಯ ದಿನ ಚೆನ್ನಾಗಿ ಕಾಣಿಸಬೇಕು ಎಂದು ಲಕ್ಷ್ಮಿ ನಾರಾಯಣ ವಿಂಜಮ್ (28) ಎಂಬಾತ ಸ್ಮೈಲ್ ಡಿಸೈನಿಂಗ್ (Smile Designing) ಶಸ್ತ್ರಚಿಕಿತ್ಸೆಗೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ವಿಚಿತ್ರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮದುವೆಯ ದಿನ ತನ್ನ ನಗು ಮತ್ತು ನಗುವನ್ನು ಉತ್ತಮವಾಗಿ ಕಾಣುವಂತೆ ಸ್ಮೈ ಲ್ ಡಿಸೈನಿಂಗ್ ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ನ ಜುಬಿಲಿ ಹಿಲ್‌ನಲ್ಲಿರುವ ಎಫ್ಎಂಎಸ್ ಇಂಟರ್ನ್ಯಾ ಷನಲ್ ಡೆಂಟಲ್ ಕ್ಲಿನಿಕ್ ಗೆ ಹೋಗಿದ್ದನು. ಆದರೆ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿಯೇ ಈತ ಸಾವನ್ನಪ್ಪಿ ದ್ದಾನೆ. ಪ್ರಜ್ಞೆ ತಪ್ಪಿಸುವ ಔಷಧ (ಅನಸ್ತೇಶಿಯಾ) ಹೆಚ್ಚು ಕೊಟ್ಟ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಲಕ್ಷ್ಮಿ ನಾರಾಯಣ್ ತಂದೆ ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ಶಸ್ತ್ರಚಿಕಿತ್ಸೆ ವೇಳೆ ತನ್ನ ಮಗ ಪ್ರಜ್ಞಾ ಹೀನನಾಗಿದ್ದ. ಸರ್ಜರಿ ಬಳಿಕ ಅವನ ತಲೆಯಲ್ಲಿ ಯಾವುದೇ ಚಲನೆಯಿಲ್ಲದಿದ್ದಾಗ ಕ್ಲಿನಿಕ್ ಸಿಬ್ಬಂದಿ ನನ್ನನ್ನು ಕರೆದರು. ನಾನು ಹೋಗಿ ನೋಡಿದಾಗ ಆತನನ್ನು ನೋಡಿ ಗಾಬರಿಯಾಯಿತು. ಕೂಡಲೇ ನಾವು ಆತನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು. ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಈ ಸಾವಿಗೆ ವೈದ್ಯರೇ ನೇರ ಕಾರಣ ಎಂದು ಲಕ್ಷ್ಮಿ ನಾರಾಯಣ ತಂದೆ ರಾಮುಲು ವಿಂಜಮ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆ – ಯುಪಿ ಕೋರ್ಟ್‍ನಿಂದ ರಾಹುಲ್ ಗಾಂಧಿಗೆ ಜಾಮೀನು
Advertisement
ಏನಿದು ಸ್ಮೈಲ್ ಡಿಸೈನಿಂಗ್?: ಜನರು ತಮ್ಮ ಹಲ್ಲುಗಳನ್ನು ಸರಿಪಡಿಸಲು, ಶುಚಿಗೊಳಿಸುವಿಕೆಗೆ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ಅವುಗಳು ಹೆಚ್ಚು ಹೊಳೆಯುವಂತೆ ಕಾಣುತ್ತವೆ. ಮಾನವನ ಹಲ್ಲುಗಳು ಕಾಲಾನಂತರದಲ್ಲಿ ಸಡಿಲಗೊಳ್ಳುತ್ತವೆ ಮತ್ತು ಅವುಗಳ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಮೈ ಲ್ ಡಿಸೈನ್ ಸರ್ಜರಿ ಮೂಲಕ ಅವುಗಳನ್ನು ಹೊಳೆಯುವಂತೆ ಮಾಡಲಾಗುತ್ತದೆ.
ಸದ್ಯ ಈ ಘಟನೆ ಸಂಬಂಧ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯದಿಂದ ಸಾವು ಎಂದು ಪ್ರ ಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕ್ಲಿನಿಕ್‌ನ ದಾಖಲೆಗಳು ಹಾಗೂ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.