Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Chikkamagaluru

ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ

Public TV
Last updated: December 1, 2023 5:43 pm
Public TV
Share
3 Min Read
MULLAYANAGIRI 1
SHARE

ಬ್ಯುಸಿ ಲೈಫ್‍ನ ಜಂಜಾಟದಿಂದ ಹೊರಬರಲು ಪ್ರಕೃತಿ ಸೌಂದರ್ಯ ಸವಿಯಬೇಕೇ ಹಾಗಿದ್ರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಒಂದು ಬಾರಿ ಭೇಟಿ ಕೊಡಿ. ಅಲ್ಲಿ ವಿವಿಧ ಪ್ರವಾಸಿ ಸ್ಥಳಗಳಿವೆ. ಹಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ನಿವಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪ್ರವಾಸಿ ಸ್ಥಳಗಳಲ್ಲಿ (Tourist Place) ಮುಳ್ಳಯ್ಯನಗಿರಿ ಬೆಟ್ಟವೂ ಒಂದು.

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಇಲ್ಲಿ ಕಾಫಿ ಹಾಗೂ ಟೀ ತೋಟಗಳು, ದಟ್ಟ ಅರಣ್ಯ ಮತ್ತು ಗಿರಿ ಶಿಖರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಪರ್ವತಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಆಕರ್ಷಿತವಾಗಿರುತ್ತವೆ. ಇವುಗಳಲ್ಲಿ ಮುಳ್ಳಯ್ಯನಗಿರಿ ಪ್ರಮುಖವಾದುದು. ಇದು ಅತ್ಯಂತ ಸುಲಭದ ಚಾರಣ ತಾಣ, ಪ್ರವಾಸಿಗರ ನೆಚ್ಚಿನ ಹಾಗೂ ಅತ್ಯಂತ ಎತ್ತರದ ಶಿಖರವಾಗಿದೆ.

ಚಿಕ್ಕಮಗಳೂರಿಗೆ ಲ್ಯಾಂಡ್ ಮಾರ್ಕ್‍ನಂತಿರೋ ಈ ಶಿಖರ ವು ಮಳೆಗಾಲದಿಂದ ಚಳಿಗಾಲದವರೆಗೆ ಭಾರೀ ಸಂಖ್ಯೆಯ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರವಿದ್ದು, ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಪ್ರದೇಶವಾಗಿದೆ. ಮುಳ್ಳಯ್ಯನಗಿರಿ (Mullayanagiri) ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮಿ. ದೂರದಲ್ಲಿದ್ದು, ಬೆಟ್ಟದ ತುದಿಯವರೆಗೆ ಉತ್ತಮವಾದ ರಸ್ತೆಯಿದೆ. ರಸ್ತೆ ಕಿರಿದಾದ್ದರಿಂದ ಈ ರಸ್ತೆ ಅಪಾಯಕಾರಿ ರಸ್ತೆಯೂ ಹೌದು. ಇದನ್ನೂ ಓದಿ: ಅನಾಮಿಕ ಸುಂದರಿ ದಿಡುಪೆ ಫಾಲ್ಸ್

ನಡೆದುಕೊಂಡು ಅಥವಾ ಸೈಕಲ್ ನಲ್ಲಿ ಪ್ರಯಾಣ ಮಾಡುವವರಿಗೆ ಉತ್ತಮ ಪ್ರಯಾಣದ ಅನುಭವ ನೀಡುತ್ತದೆ. ಆದರೆ ಕಾರು ಅಥವಾ ಅದಕ್ಕಿಂತ ದೊಡ್ಡ ವಾಹನಗಳು ಇಲ್ಲಿ ಚಲಿಸಬೇಕು ಎಂದರೆ ಕೊಂಚ ಅಪಾಯವೇ ಸರಿ. ಯಾಕೆಂದರೆ ಇಲ್ಲಿನ ರಸ್ತೆಗಳು ಉತ್ತಮವಾಗಿವೆಯಾದರೂ ಕಿರಿದಾದದ್ದು. ಅಲ್ಲದೆ ಬೆಟ್ಟ ಏರುತ್ತಿದ್ದಂತೆಯೇ ಮಂಜುಕವಿದ ವಾತಾವರಣ ನಿರ್ಮಾಣವಾಗುವುದರಿಂದ ಅಪಘಾತದ ಸಂಭವ ಹೆಚ್ಚು. ಹೀಗಾಗಿ ಕಾರಿನಲ್ಲಿ ಚಲಿಸುವವರು ನಿಧಾನದ ಮೊರೆಹೋಗಬೇಕು. ಇಲ್ಲಿನ ರಸ್ತೆಯ ಕಡಿದಾದ ತಿರುವಿನಲ್ಲಿ ಕಾರುಗಳು ಚಲಿಸಲು ಕೇವಲ ಉತ್ತಮ ಚಾಲಕನಿದ್ದರೆ ಸಾಲದು ಅನುಭವ ಹಾಗೂ ಸಹನೆ ಕೂಡ ಇರಬೇಕು.

MULLAYANAGIRI

ಗಿರಿಯ ತುದಿಯಲ್ಲಿ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿದ ಗದ್ದುಗೆ ಹಾಗೂ ದೇವಾಲಯವಿದೆ. ಪುಟ್ಟದಾದ ಬಸವನ ಪ್ರತಿಮೆ ಹಾಗೂ ಪಕ್ಕದಲ್ಲಿ ಗುಹೆಯಂತಹ ರಚನೆಯಿದೆ. ಗದ್ದುಗೆ ಇರುವ ಜಾಗವನ್ನು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಬೇಕು. ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಆವರಿಸುತ್ತದೆ. ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೇನೋ ಎಂಬ ಅನುಭವ ಎದುರಾಗುತ್ತದೆ. ನಮ್ಮ ಪಕ್ಕದಲ್ಲಿರುವ ವ್ಯಕ್ತಿ/ವಸ್ತುಗಳೇ ಕಾಣದಷ್ಟು ಮಂಜು ಆವರಿಸುವ ಮೂಲಕ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇದನ್ನೂ ಓದಿ: ಇದು ಅಂತಿಂಥ ಕಲ್ಲಲ್ಲ ಗಡದ್ದಾದ ಗಡಾಯಿ ಕಲ್ಲು!

ಬೆಟ್ಟದ ತುತ್ತತುದಿಯಲ್ಲಿರುವ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಿದ್ದರೆ ಸುಯ್ಯನೆ ಬೀಸುವ ಗಾಳಿ ಎಲ್ಲಿ ನಮ್ಮನ್ನೇ ಹೊತ್ತೊಯ್ಯುತ್ತದೆಯೋ ಎನ್ನುವ ಭೀತಿ ಕೂಡ ಕಾಡಲಾರಂಭಿಸುತ್ತದೆ. ಆ ಪ್ರಮಾಣದಲ್ಲಿ ಇಲ್ಲಿ ಗಾಳಿ ಬಿರುಸಾಗಿರುತ್ತದೆ. ಈ ವೇಳೆ ನಮಗೆ ಕಾಣಸಿಗುವ ಗಿರಿ-ಕಂದರಗಳು, ಪ್ರಪಾತಗಳು ಭಯದೊಂದಿಗೆ ಅಪೂರ್ವ ಸಂತೋಷವನ್ನು ಕೂಡ ಉಂಟು ಮಾಡುತ್ತದೆ. ಚಾರಣ ಪ್ರಿಯರ ಸ್ವರ್ಗವೆನಿಸಿಕೊಂಡಿರುವ ಮುಳ್ಳಯ್ಯನಗಿರಿ ದಕ್ಷಿಣ ಭಾರತದಲ್ಲೇ ಪ್ರಮುಖ ಚಾರಣ ಸ್ಥಳಗಳಲ್ಲೊಂದು.

ಹೋಗುವುದು ಹೇಗೆ..?: ಮಂಗಳೂರಿನಿಂದ ಸುಮಾರು 172 ಕಿ.ಮೀ ದೂರದಲ್ಲಿದ್ದು, ಉಡುಪಿಯಿಂದ 187 ಕಿ.ಮೀ, ಬೆಂಗಳೂರಿನಿಂದ 264 ಕಿ.ಮೀ, ಉಜಿರೆಯಿಂದ 106 ಕಿ.ಮೀ. ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಮಂಗಳೂರು-ಉಜಿರೆ-ಚಾರ್ಮಾಡಿ ಮಾರ್ಗವಾಗಿ ಹೋಗಬಹುದು. ಇದಲ್ಲದೆ ಮಂಗಳೂರು-ಕಾರ್ಕಳ-ಕಳಸ-ಬಾಳೆಹೊನ್ನೂರು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‍ಗಳ ಸೇವೆ ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯೂ ಇದೆ. ಸ್ವಂತ ವಾಹನಗಳು ಇಲ್ಲದ ಮಂದಿ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಈ ಸ್ಥಳವನ್ನು ತಲುಪಬಹುದು.

MULLAYANAGIRI FINAL

ಊಟ-ತಿಂಡಿ ವ್ಯವಸ್ಥೆ ಇಲ್ಲ: ವಾರಾಂತ್ಯದಲ್ಲಿ ಮಾತ್ರ ಬೆಟ್ಟದ ಬುಡದಲ್ಲಿ ಮಾತ್ರ ಸ್ಥಳೀಯರು ಕೆಲ ತಿಂಡಿ ತಿನಿಸುಗಳನ್ನು ಮಾರುತ್ತಾರೆ. ಹೊರತು ಇಲ್ಲಿ ಊಟ ತಿಂಡಿಯ ವ್ಯವಸ್ಥೆ ಇಲ್ಲ. ಹೀಗಾಗಿ ಟ್ರೆಕ್ಕಿಂಗ್ ಹೋಗುವವರು ಊಟ-ತಿಂಡಿಯನ್ನು ಕಟ್ಟಿಕೊಂಡು ಹೋಗುವುದು ಒಳ್ಳೆಯದು.

ಯಾವ ಸಮಯ ಸೂಕ್ತ: ಮುಳ್ಳಯನಗಿರಿ ಟ್ರಿಪ್ ಹೋಗ ಬಯಸುವವರು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಹೋಗುವುದು ಒಳ್ಳೆಯದು. ಈ ಸಮಯದಲ್ಲಿ ಬೆಟ್ಟದ ತುದಿಯಲ್ಲಿ ನಿಂತರೆ ಬಿರುಸಾದ ಗಾಳಿ, ಬಿಸಿಲಿನಲ್ಲೂ ಚಳಿಯ ಅನುಭವ ನೀಡುತ್ತದೆ.

TAGGED:ChikkamagaluruMullayanagiriTourist placeTrekkingಚಿಕ್ಕಮಗಳೂರುಟ್ರೆಕ್ಕಿಂಗ್ಪ್ರವಾಸಿ ತಾಣಮುಳ್ಳಯನಗಿರಿ
Share This Article
Facebook Whatsapp Whatsapp Telegram

Cinema Updates

chaithra kundapura 1 3
ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ
9 hours ago
vasuki vaibhav
ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕ ವಾಸುಕಿ ವೈಭವ್ ದಂಪತಿ
10 hours ago
salman khan
ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್
11 hours ago
ranjith kumar
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್
12 hours ago

You Might Also Like

jaishankar 1
Latest

ಪಾಕ್‌ನಲ್ಲಿರುವ ಉಗ್ರರ ನೆಲೆಗಳಿಗೆ ಹೊಡೀತೀವಿ: ಅಮೆರಿಕಗೆ ಮೊದಲೇ ಹೇಳಿದ್ದ ಜೈಶಂಕರ್‌

Public TV
By Public TV
5 hours ago
Starlink satellite
Latest

ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್‌ ಉಪಗ್ರಹ – ಡ್ರೋನ್‌ ಅಂತ ಬೆಚ್ಚಿದ ಜನ

Public TV
By Public TV
5 hours ago
Ramalinga Reddy 1
Districts

ಕದನ ವಿರಾಮದ ಬಗ್ಗೆ ಸಮಾಧಾನ ಇಲ್ಲ, ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಕಲಿಸಬೇಕಾಗಿತ್ತು: ರಾಮಲಿಂಗಾ ರೆಡ್ಡಿ

Public TV
By Public TV
6 hours ago
A.N.Pramod Vice Admiral
Latest

ಪಾಕ್‌ ಮತ್ತೆ ಬಾಲ ಬಿಚ್ಚಿದ್ರೆ ನಾವೇನು ಮಾಡ್ತೀವಿ ಅಂತ ಅವರಿಗೆ ಗೊತ್ತಾಗಿದೆ: ನೌಕಾ ಪಡೆ ಎಚ್ಚರಿಕೆ

Public TV
By Public TV
6 hours ago
DGMO Pressmeet Operation Sindoor
Latest

ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

Public TV
By Public TV
8 hours ago
HD Kumaraswamy
Karnataka

ಕಾಶ್ಮೀರದಲ್ಲಿ ಸಿಲುಕಿರುವ 13 ಕರ್ನಾಟಕದ ವಿದ್ಯಾರ್ಥಿಗಳು – ವಾಪಸ್ ಕರೆತರಲು ನೆರವಾದ ಹೆಚ್‌ಡಿಕೆ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?