ಶಿವಮೊಗ್ಗ: ಬಿರುಬೇಸಿಗೆಯಲ್ಲೂ ಮಳೆಗಾಲದಂತೆ ಧುಮ್ಮಿಕ್ಕಿ ಹರಿಯುತ್ತಿರುವ ಶರಾವತಿ ಜಲಧಾರೆಯನ್ನು ಕಂಡು ಪ್ರವಾಸಿಗರು ಇದೀಗ ಫುಲ್ ಶಾಕ್ ಆಗಿದ್ದಾರೆ.
Advertisement
ಕೇವಲ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಧುಮ್ಮಿಕ್ಕಿ ಭೋರ್ಗರೆಯುತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ಇದೀಗ ಬೇಸಿಗೆಯಲ್ಲೂ ನಳನಳಿಸುತ್ತಿದೆ. ಆಶ್ಚರ್ಯವಾದರೂ ಇದು ಸತ್ಯ. ಕಡಿದಾದ ಬಂಡೆಗಳ ನಡುವೆ ಶರಾವತಿಯ ನರ್ತನ ಬಿರುಬೇಸಿಗೆಯಲ್ಲೂ ಕಾಣಸಿಗುತ್ತಿದೆ.
Advertisement
Advertisement
ಜೋಗವು ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತೀ ಎತ್ತರದ ಜಲಪಾತವಾಗಿದ್ದು, ಸುಮಾರು 900 ಅಡಿ ಎತ್ತರದಿಂದ ಈ ಜಲಪಾತದ ಕಣಿವೆಗಳಲ್ಲಿ ಹಾಲ್ನೊರೆಯಂತೆ ಶರಾವತಿ ಭೋರ್ಗರೆಯುತ್ತಾಳೆ. ಕೇವಲ ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಕಣ್ಮನ ಸೆಳೆಯುವ ಜೋಗ ಜಲಪಾತದಲ್ಲಿ ಇದೀಗ ಬೇಸಿಗೆ ಸಮಯದಲ್ಲೂ ನಯನ ಮನೋಹರವಾಗಿ ಜಲಧಾರೆ ಧುಮ್ಮಿಕ್ಕಿ ಹರಿಯತ್ತಿದೆ.
Advertisement
ಈ ಸುಂದರ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಸ್ಥಳೀಯರು ಸೇರಿದಂತೆ, ರಾಜ್ಯ, ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತಿದ್ದಾರೆ. ಕಡಿದಾದ ಬಂಡೆ ಕಣಿವೆಗಳ ಮೂಲಕ ಶರಾವತಿ ಹರಿಯುವುದನ್ನ ನೋಡುವುದೇ ಒಂದು ಸೊಬಗು. ಅದರಲ್ಲೂ ನಿಸರ್ಗಕ್ಕೆ ಅತ್ಯಂತ ಆಪ್ತ ಸ್ಥಳವಾಗಿರುವ ಜೋಗದಲ್ಲಿ, ಇದೀಗ ಬಿರು ಬಿಸಿಲ ಝಳದ ನಡುವೆ ರಾಜ, ರಾಣಿ, ರೋರರ್, ರಾಕೆಟ್ ಕಣಿವೆಗಳಲ್ಲಿ ಜಲಧಾರೆ ಹರಿಯುತ್ತಿದ್ದು, ಎಲ್ಲರೂ ಆಶ್ಚರ್ಯಗೊಳ್ಳುವಂತಾಗಿದೆ. ಇದನ್ನೂ ಓದಿ: ಕುಂಕುಮ ಎಂದರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ
ಇಲ್ಲಿನ ಮಹಾತ್ಮ ಗಾಂಧಿ ಪವರ್ ಸ್ಟೇಷನ್ ಗೆ ನೀರು ಹರಿಸುವ ಚೈನಾ ಗೇಟ್ ನಲ್ಲಿ ಸಾಕಷ್ಟು ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಈ ನೀರು ನೇರವಾಗಿ ನದಿ ಮೂಲಕ ಜಲಪಾತಕ್ಕೆ ಹರಿದು ಬರುತ್ತಿದೆ. ಪವರ್ ಚಾನಲ್‍ಗಳಲ್ಲೂ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು, ಅದು ಕೂಡ ಜಲಪಾತಕ್ಕೆ ನೀರು ಹರಿಯಲು ಕಾರಣವಾಗಿದ್ದು ಇದರಿಂದ ಜಲಪಾತದಲ್ಲಿ ನಿರಂತರವಾಗಿ ಜಲಧಾರೆ ಸೃಷ್ಟಿಯಾಗಲು ಕಾರಣವಾಗಿದೆ.
ಹಾಲ್ನೊರೆಯಂತೆ ಉಕ್ಕಿ ಹರಿಯುವ ನೀರು ನೋಡುವುದೇ ಒಂದು ದೃಶ್ಯ ಕಾವ್ಯ. ಅದರಲ್ಲೂ ಬಿರು ಬೇಸಿಗೆಯಲ್ಲಿ ಕೂಡ ಅಚಾನಕ್ಕಾಗಿ ಹರಿದು ಬಂದ ನೀರು ಜಲಪಾತದ ವರ್ಣನೆಗೆ ಪದಗಳೇ ಸಾಲದು. ಅಚಾನಕ್ಕಾಗಿ ಜೋಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಸ್ಥಳಿಯರು ಇದೀಗ ಮನಮೋಹಕ ದೃಶ್ಯವನ್ನು ಕಂಡು ಸಂಭ್ರಮಿಸುವಂತಾಗಿದೆ.