ಹರ್ಯಾಣ: ಪಬ್‍ಜಿ ಆಡಬೇಡ ಎಂದು ಬೈದು ತಾಯಿ ಮೊಬೈಲ್‍ನ್ನು ಕಿತ್ತುಕೊಂಡಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಹರ್ಯಾಣದಲ್ಲಿ ನಡೆದಿದೆ.
10ನೇ ತರಗತಿವರೆಗೆ ಓದಿರುವ ಬಾಲಕ ಕಳೆದ ವರ್ಷದಿಂದ ಶಾಲೆಗೆ ಹೋಗುವುದನ್ನು ಬಿಟ್ಟದ್ದ. ಆದರೆ ಸದಾ ಮನೆಯಲ್ಲಿ ಪಬ್‍ಜಿ ಆಡಿಕೊಂಡೇ ಸಮಯ ಕಳೆಯುತ್ತಿದ್ದ ಆತನ ಈ ವರ್ತನೆ ತಾಯಿಗೆ ಬೇಸರ ತರಿಸಿತ್ತು. ಅದ್ದರಿಂದ ತಾಯಿ ಯಾವಾಗಲೂ ಬೈಯುತ್ತಿದ್ದರು ಎನ್ನಲಾಗಿದೆ.
ಆತನ ತಂದೆ ಪೊಲೀಸ್ ಆಗಿದ್ದು ಈ ಘಟನೆ ಬಗ್ಗೆ ಮಾತನಾಡಿರುವ ಅವರು, ನಾನು ಶನಿವಾರ ಕೆಲಸಕ್ಕೆ ಬಂದಿದ್ದೆ. ಸಂಜೆ ಮಗನ ಮೊಬೈಲ್‍ನಲ್ಲಿ ಗೇಮ್ ಆಡುತ್ತಿರುವುದನ್ನು ಕಂಡ ತಾಯಿ ಬೈದು ಮೊಬೈಲ್ ಕಿತ್ತುಕೊಂಡಿದ್ದಾಳೆ. ಈ ವಿಷಯವನ್ನೇ ಗಂಭೀರವಾಗಿ ತೆಗೆದುಕೊಂಡ ಮಗ ಬೆಳಗ್ಗೆ ಎದ್ದು ನೋಡುವುದರೊಳಗೆ ಅವನ ರೂಮ್‍ನಲ್ಲಿ ನೇಣಿಗೆ ಶರಣಾಗಿದ್ದ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಆದರೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.