ಮ್ಯಾಡ್ರೀಡ್: ವಿದ್ಯುತ್ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಮನವಿ ಮಾಡಿದ್ದಾರೆ.
ನಾನು ಈಗಾಗಲೇ ಟೈ ಕಟ್ಟುವುದನ್ನು ನಿಲ್ಲಿಸಿದ್ದೇನೆ. ನಮ್ಮ ಮಂತ್ರಿಗಳು ಮತ್ತು ಕಚೇರಿಯಲ್ಲಿರುವ ಸಿಬ್ಬಂದಿ ಈ ನಡೆಯನ್ನು ಅನುಸರಿಸಬೇಕು. ಈ ಮೂಲಕ ವಿದ್ಯುತ್ ಶಕ್ತಿಯನ್ನು ಉಳಿತಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.
Advertisement
ನೀಲಿ ಬಣ್ಣದ ಸೂಟ್ ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿ ಮಾತಾನಾಡಿದ ಅವರು, ಈ ನಿರ್ಧಾರದ ಮೂಲಕ ಎಲ್ಲರೂ ವಿದ್ಯುತ್ ಉಳಿತಾಯಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಶೂಟ್ ವೇಳೆ ದಾಳಿ: 8 ಮಹಿಳಾ ರೂಪದರ್ಶಿಗಳ ಮೇಲೆ ಅತ್ಯಾಚಾರ
Advertisement
Sánchez asks not to wear a tie "to save" energy
The President of the Government, Pedro Sánchez, has appeared without a tie during the presentation at the Palacio de La Moncloa of the balance of the political course.
pic.twitter.com/wIXvikgP7S
— Ignorance, the root and stem of all evil (@ivan_8848) July 29, 2022
Advertisement
ಆಗಸ್ಟ್ 1 ರಿಂದ ಸ್ಪೇನ್ ಸರ್ಕಾರವು ಇಂಧನ ದಕ್ಷತೆ ಮತ್ತು ಉಳಿತಾಯ ಕಾರ್ಯಕ್ರಮವನ್ನು ಆರಂಭಿಸಲಿದೆ. ಇತರ ಯುರೋಪ್ ರಾಷ್ಟ್ರಗಳು ಇಂಧನ ಉಳಿತಾಯಕ್ಕೆ ಯೋಜನೆ ಹಾಕಿಕೊಂಡಿವೆ.
Advertisement
ಯುರೋಪ್ ರಾಷ್ಟ್ರಗಳಲ್ಲಿ ಬಿಸಿಗಾಳಿ ಜಾಸ್ತಿಯಾಗಿದೆ. 27 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಏರ್ ಕಂಡಿಷನ್ ಬಳಕೆ ಹೆಚ್ಚಾಗುತ್ತಿದೆ.
ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ಸ್ಪೇನ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿದ್ಯುತ್ ಬೆಲೆಗಳು ಏರಿಕೆಯಾಗಿತ್ತು. ಆದರೆ ಮೆಡಿಟರೇನಿಯನ್ ರಾಷ್ಟ್ರ ಮತ್ತು ಪೋರ್ಚುಗಲ್‌ನಿಂದ ನ್ಯಾಚುರಲ್ ಗ್ಯಾಸ್ ಆಮದು ಮಾಡುತ್ತಿರುವ ಕಾರಣ ವಿದ್ಯುತ್ ಬೆಲೆ ಇಳಿಕೆಯಾಗಿದೆ.