ಪುಣೆ: ಮದುವೆಯ ರಾತ್ರಿ ವಧುವಿನ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ “ಸ್ಟಾಪ್ ದಿ ವಿ ರಿಚುವಲ್” ಎಂಬ ಹೆಸರಿನಲ್ಲಿ ಪುಣೆಯ ಕೆಲವು ಯುವಕ-ಯುವತಿಯರು ವಾಟ್ಸಪ್ ಗುಂಪೊಂದನ್ನ ರಚಿಸಿ ಅಭಿಯಾನ ಆರಂಭಿಸಿದ್ದಾರೆ.
ಈ ಪದ್ಧತಿ ಸಂವಿಧಾನಕ್ಕೆ ವಿರುದ್ಧ ಹಾಗೂ ಕಾನೂನಿಗೆ ವಿರುದ್ಧ ಎಂದು ಪೊಲೀಸ್ ಅಧಿಕಾರಿಗಳ ಬಳಿ ದೂರು ದಾಖಲಿಸಿದ್ದಾರೆ. ಕಂಜರ್‍ಭಾತ್ ಸಮುದಾಯದಲ್ಲಿ ಈ ಪದ್ಧತಿ ಅಸ್ತಿತ್ವದಲ್ಲಿದೆ. ದಂಪತಿಯ ಮದುವೆಯ ರಾತ್ರಿ ಗ್ರಮ ಪಂಚಾಯ್ತಿ ಬಿಳಿ ಬಣ್ಣದ ಬೆಡ್‍ಶೀಟ್ ಹಾಸುತ್ತದೆ. ಒಂದು ವೇಳೆ ಬೆಡ್‍ಶೀಟ್ ಮೇಲೆ ಕೆಂಪು ಕಲೆ ಆಗಿದ್ದರೆ ಮಹಿಳೆ ಈ ಪರೀಕ್ಷೆಯಲ್ಲಿ ಪಾಸ್ ಆಗುತ್ತಾಳೆ. ಇಲ್ಲವಾದ್ರೆ ಆಕೆ ಮದುವೆಗೆ ಮುನ್ನ ದೈಹಿಕ ಸಂಪರ್ಕ ಹೊಂದಿದ್ದಳು ಎಂದು ಆರೋಪಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮಹಿಳೆಯ ಒಪ್ಪಿಗೆ ಇಲ್ಲದೆಯೂ ಇಂತಹ ಪರೀಕ್ಷೆಯನ್ನು ಮಾಡಲಾಗುತ್ತದೆ.
Advertisement
Advertisement
ನಾವು ತ್ರಿವಳಿ ತಲಾಖ್ ಹಾಗೂ ಫೇಸ್‍ಬುಕ್‍ನಲ್ಲಿ ಖಾಸಗಿತನದ ಹಕ್ಕಿನ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದೆವು. ನಮ್ಮ (ಕಂಜರ್‍ಭಾತ್) ಸಮುದಾಯದ ಕೆಲವು ಸಮಾನ ಮನಸ್ಕರು ಇದಕ್ಕೆ ಗುಣಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಈ ಶೋಷಣೆಯ ವಿರುದ್ಧ ಪ್ರತಿಭಟಿಸಲು ಮುಂದೆ ಬಂದಿದ್ದೇವೆ. ಇದು ಸಂವಿಧಾನದ ಆರ್ಟಿಕಲ್ 14 ಹಾಗೂ 21ಕ್ಕೆ ವಿರುದ್ಧ ಎಂದು ಈ ಗುಂಪಿನ ಸ್ಥಾಪಕ ವಿವೇಕ್ ತಮೈಚೇಕರ್ ಹೇಳಿದ್ದಾರೆ.
Advertisement
Advertisement
ಇದು ನಮ್ಮ ಸಂಪ್ರದಾಯವಾದ್ದರಿಂದ ಈ ಆಚರಣೆಯನ್ನ ಮಾಡಬೇಕು. ಇಲ್ಲವಾದ್ರೆ ಹೆಣ್ಣುಮಕ್ಕಳು ಹಾಳಾಗ್ತಾರೆ ಎಂದು ಇಲ್ಲಿನ ಜನ ನಂಬಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವು ಅಭಿಯಾನ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.