ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‍ನ ತ್ರಿವೇಣಿ ಸಂಗಮದಲ್ಲಿ ಪೌರಕಾರ್ಮಿಕರ ಪಾದ ಪೂಜೆ ಮಾಡಿರುವುದು ಚುನಾವಣಾ ಗಿಮಿಕ್ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಪ್ರಕಾಶ್ ರೈ ತನ್ನ ಟ್ವಿಟ್ಟರಿನಲ್ಲಿ ಮೋದಿ ಅವರು ಪಾದಪೂಜೆ ಮಾಡುತ್ತಿರುವ ವಿಡಿಯೋ ಹಾಕಿ ಅದಕ್ಕೆ, “ಪ್ರೀತಿಯ ಸುಪ್ರೀಂ ಲೀಡರ್. ನೀವು ಈ ಎಲೆಕ್ಷನ್ ಗಿಮಿಕ್ ನಿಲ್ಲಿಸಿ. ಪೌರಕಾರ್ಮಿಕರಿಗೆ ಬೇಕಾಗಿರುವುದು ಕೆಲಸದ ಭದ್ರತೆ, ತಮ್ಮ ಮಕ್ಕಳ ಭವಿಷ್ಯ ಹಾಗೂ ಸುರಕ್ಷಿತ ಕ್ರಮ ಹೊರತು ನಿಮ್ಮ ನಾಟಕ ಅಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
Advertisement
ಈ ಟ್ವೀಟ್ ನಲ್ಲಿ ರೈ ಪೌರ ಕಾಮಿರ್ಕರು ಕೆಲಸ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ #Dramabandkaromodi #Bjpbhagaodeshbachao ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದಪೂಜೆ – ವಿಡಿಯೋ ನೋಡಿ
Advertisement
Advertisement
ಭಾನುವಾರ ಪ್ರಧಾನಿ ಮೋದಿ ಉತ್ತರಪ್ರದೇಶದ ಪ್ರಯಾಗ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಹಣೆಗೆ ವಿಭೂತಿ ಹಚ್ಚಿಕೊಂಡು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 5 ಜನ ಪೌರಕಾರ್ಮಿಕರ ಪಾದಕ್ಕೆ ನೀರು ಹಾಕಿ ತೊಳೆದು, ಕರವಸ್ತ್ರದಿಂದ ಸ್ವಚ್ಛಗೊಳಿಸಿದ್ದರು. ಪಾದಪೂಜೆಯ ಬಳಿಕ ಅವರಿಗೆ ಶಾಲು ಹೊದಿಸಿ ಕೈಮುಗಿದು ಧನ್ಯವಾದ ತಿಳಿಸಿದ್ದರು.
Advertisement
ಪಾದಪೂಜೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ತ್ರಿವೇಣಿ ಸಂಗಮಕ್ಕೆ ತೆರಳಿ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಬಳಿಕ ಸ್ವಚ್ಛ ಕುಂಭ್ – ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
#swatchbharathSPA
dear supreme leader . Stop this ELECTION GIMMICKS
Manual #scavengers need
Dignity of labour .. job security.. future for their children .. better equipments n safety measures .. NOT YOUR DRAMA #Dramabandkaromodi #kumbmela2019 #modikumbhvisit #Bjpbhagaodeshbachao pic.twitter.com/C1ii9sv7EK
— Prakash Raj (@prakashraaj) February 25, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv