ಧಾರವಾಡ: 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ, ಒಂದೇ ಒಂದು ಡಿಜೆ ಹೊರಗೆ ಬಾರದಂತೆ ನಾನೇ ನೋಡಿಕೊಳ್ಳುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದರು.
ಪ್ರಾರ್ಥನಾ ಮಂದಿರಗಳ ಮೇಲೆ ಹಾಕಿರುವ ಮೈಕ್ ವಿಚಾರವಾಗಿ ಧಾರವಾಡ ಎಸ್‌ಪಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ 15 ವರ್ಷದ ಹಿಂದೆಯೇ ಆದೇಶ ನೀಡಿದೆ. ಶಬ್ದ ಮಾಲಿನ್ಯ ಆಗಬಾರದು ಅಂತ ಹೇಳಿದ್ರೂ ಇಲ್ಲಿಯವರೆಗೆ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿಲ್ಲ ಎಂದರು.
Advertisement
Advertisement
ಶಬ್ದದ ಪರಿಣಾಮದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಪ್ರಾರ್ಥನಾ ಮಂದಿರಗಳು ಯಾವುದೇ ಧರ್ಮಕ್ಕೆ ಸೇರಿರಲಿ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ನಾಟಕವಾಡುತ್ತಿದೆ. ಇದಕ್ಕಾಗಿಯೇ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ಸರ್ಕಾರದ ಕಾನೂನು ಜಾರಿ ಮಾಡದಿದ್ದರೆ, ಅವರಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ ಎಂದರು. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಮುನ್ನೆಚ್ಚರಿಕಾ ಕ್ರಮ – ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?
Advertisement
ಈ ಕಾರಣಕ್ಕೆ ನಾವು ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ ಮೈಕ್ ಕೂಗುತ್ತಿವೆ. ಇದು ಇನ್ನೂ ನಿಂತಿಲ್ಲ. ನಮ್ಮನ್ಯಾರೂ ಕೇಳೋದಿಲ್ಲ ಎನ್ನುವ ಮನಸ್ಥಿತಿ ದೊಡ್ಡ ಮುಳ್ಳಾಗಿ ಪರಿಣಮಿಸಲಿದೆ. ಸರ್ಕಾರಕ್ಕೆ ಇದು ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮನವಿ ಇಲ್ಲ, ನೇರವಾಗಿ ನುಗ್ಗುವುದೇ. ಅದು ಹೇಗೆ, ಏನು ಎನ್ನುವುದನ್ನು ಮುಂದಿನ ಹೋರಾಟದಲ್ಲಿಯೇ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement
ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದ್ದಾರೆ. ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ? ವರ್ಷಕ್ಕೆ ಒಂದೇ ಬಾರಿ ಡಿಜೆ ಹಚ್ಚಿದರೆ ಅದು ನಿಮ್ಮ ಕಣ್ಣಿಗೆ ಬೀಳುತ್ತದೆ. ಪ್ರತಿ ದಿನ 5 ಬಾರಿ ಮೈಕ್ ಹಚ್ಚೋದು ಕಾಣೋದಿಲ್ವಾ? ಎಂದು ಕಿಡಿ ಕಾರಿದರು. ಇದನ್ನೂ ಓದಿ: ಎಸಿಬಿ ರದ್ದು; ಹೈಕೋರ್ಟ್ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ
ನೀವು ಡಿಜೆ ಸೀಜ್ ಮಾಡಿ, ನಾವು ಇದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. 3 ವರ್ಷದಿಂದ ಕೊರೊನಾದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವೇಳೆಯಲ್ಲಿ ಎಲ್ಲದಕ್ಕೂ ನಿರ್ಬಂಧ ಏಕೆ? 5 ಬಾರಿ ಮೈಕ್ ಕೂಗೋದನ್ನು ನಿಲ್ಲಿಸಿ, ನಾನೇ ಡಿಜೆಯನ್ನು ನಿಲ್ಲಿಸುತ್ತೇನೆ. ಒಂದು ಡಿಜೆಯೂ ಹೊರಗೆ ಬಾರದಂತೆ ನಾನೇ ನಿಲ್ಲಿಸುತ್ತೇನೆ. ಆದರೆ ವಿನಾಕಾರಣ ಗಣೇಶೋತ್ಸವಕ್ಕೆ ಕಿರಿಕಿರಿ ಮಾಡಬೇಡಿ ಎಂದು ಮನವಿ ಮಾಡಿದರು.