ಚೆನ್ನೈ: ನಗರದ ವಡಪಳನಿಯಲ್ಲಿರುವ ಬಿರಿಯಾನಿ ಅಂಗಡಿಯೊಂದರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಇನ್ಮುಂದೆ ಅಂಗಡಿಯಲ್ಲಿ ಬಿರಿಯಾನಿ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ದಾಳಿ ವೇಳೆ 70 ಕೆಜಿ ಅವಧಿ ಮೀರಿದ ಮಾಂಸ ಮತ್ತು ತಯಾರಿಸಲಾದ 30 ಕೆಜಿ ಬಿರಿಯಾನಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
ರೆಫ್ರಿಜರೇಟರ್‍ಗಳಲ್ಲಿ ಅವಧಿ ಮೀರಿದ ಮಾಂಸವನ್ನು ಸಂಗ್ರಹಿಸಲಾಗಿದ್ದು, ಜೊತೆಗೆ ರೆಫ್ರಿಜರೇಟರ್ ತಾಪಮಾನವನ್ನು ಸರಿಯಾಗಿ ಅಳವಡಿಸಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಅಂಗಡಿ ಮಾಲೀಕನಿಗೆ 5,000ರೂ ದಂಡ ವಿಧಿಸಿದ್ದು, ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (ಎನ್‍ಎಬಿಎಲ್) ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಕೋಲ್ಡ್ ಚೈನ್ ಮ್ಯಾನೇಜ್‍ಮೆಂಟ್‍ನಲ್ಲಿ ಪ್ರಮಾಣಪತ್ರವನ್ನು ಪಡೆಯುವಂತೆ ಅಂಗಡಿ ಮಾಲೀಕನಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರು ನಗರಸಭೆಯಿಂದ ಕಲುಷಿತ ನೀರು ಸರಬರಾಜು – ಮತ್ತೋರ್ವ ವ್ಯಕ್ತಿ ಸಾವು
Advertisement
ಸದ್ಯ ವಶಪಡಿಸಿಕೊಂಡ ಮಾಂಸ ಮತ್ತು ಬಿರಿಯಾನಿಯನ್ನು ಪರೀಕ್ಷೆಗಾಗಿ ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ, ಆಹಾರ ಸುರಕ್ಷತಾ ಕಾಯಿದೆಗೆ ಅನುಗುಣವಾಗಿ ಅಂಗಡಿಯವರ ಮೇಲೆ ಹೆಚ್ಚಿನ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ