ಕೋಲ್ಕತ್ತಾ: ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಲ್ಲಿಸಿ, ದುರ್ಗಾ ಪೂಜೆಯ ಕಡೆಗೆ ಗಮನ ಹರಿಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಕರೆ ನೀಡಿದ್ದಾರೆ.
ಸಿಎಂ ಹೇಳಿಕೆಗೆ ಕೋಲ್ಕತ್ತಾ ಪ್ರಕರಣದ ಮೃತ ಟ್ರೈನಿ ವೈದ್ಯೆಯ ತಾಯಿ ಮಮತಾ ಬ್ಯಾನರ್ಜಿಯವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
ನಾವು ನಮ್ಮ ಮಗಳ ಜೊತೆ ದುರ್ಗಾಪೂಜೆಯನ್ನು ಆಚರಿಸುತ್ತಿದ್ದೆವು. ಮುಂದೆ ಇನ್ಯಾವುದೇ ಹಬ್ಬ ಅಥವಾ ದುರ್ಗಾಪೂಜೆಯನ್ನು ಆಚರಣೆ ಮಾಡುವುದಿಲ್ಲ. ಅವರು ನಮ್ಮ ಮಗಳನ್ನು ಹಿಂದಿರುಗಿಸಲಿ. ಒಂದು ವೇಳೆ ಇದೇ ರೀತಿಯ ಘಟನೆ ಅವರ ಮನೆಯಲ್ಲಿಯೇ ಆಗಿದ್ದರೆ ಇದೇ ರೀತಿಯಾಗಿ ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
Advertisement
ಇತ್ತೀಗಷ್ಟೇ ಬ್ಯಾನರ್ಜಿ ಅವರು ಕುಟುಂಬಕ್ಕೆ ಹಣವನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕಳೆದ ಒಂದು ದಿನದ ಹಿಂದೆಯಷ್ಟೇ ಸಂತ್ರಸ್ತೆ ತಾಯಿ ಕೂಡ ಹಣದ ಆಫರ್ ಬಂದಿದೆ ಎಂದು ಒಪ್ಪಿಕೊಂಡಿದ್ದರು. ಆದ್ರೆ ಮಮತಾ ಬ್ಯಾನರ್ಜಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದರು.
Advertisement
ಹಣ ನೀಡಿರುವ ಆರೋಪ ಕುರಿತು ಸಿಎಂ ಹೇಳಿದ್ದೇನು?
Advertisement
ಆರ್‌ಜಿಕರ್ ಕಾಲೇಜಿನಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನಜಿ ಸೇರಿ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಶವವನ್ನು ನೋಡಲು ನಮಗೆ ಅವಕಾಶ ನೀಡಲಿಲ್ಲ. ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಪೊಲೀಸ್ ಠಾಣೆಯಲ್ಲಿ ಕಾಯಬೇಕಾಯಿತು. ನಂತರ, ಶವವನ್ನು ನಮಗೆ ಹಸ್ತಾಂತರಿಸಿದಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣವನ್ನು ನೀಡಿದರು. ಅದನ್ನು ನಾವು ತಕ್ಷಣ ನಿರಾಕರಿಸಿದ್ದೇವೆ ಎಂದು ಮೃತ ವೈದ್ಯೆಯ ತಂದೆ ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಮೃತ ವೈದ್ಯೆಯ ಕುಟುಂಬಕ್ಕೆ ನಾನು ಯಾವತ್ತೂ ಹಣ ನೀಡಿಲ್ಲ. ಇದು ಅಪಪ್ರಚಾರವಲ್ಲದೆ ಬೇರೇನೂ ಅಲ್ಲ. ಹಣವು ಎಂದಿಗೂ ಜೀವನವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ನಾನು ಪೋಷಕರಿಗೆ ಈ ಹಿಂದೆ ಹೇಳಿದ್ದೆ. ತಮ್ಮ ಮಗಳ ನೆನಪಿಗಾಗಿ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ಅವರು ಬಯಸಿದರೆ ಸರ್ಕಾರವು ಅವರ ಪರವಾಗಿ ನಿಂತಿದೆ ಎಂದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.