ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಅನಾವಶ್ಯಕವಾಗಿ ಬಳಸಲಾಗುತ್ತಿರುವ ಹಿಂದಿ ಭಾಷೆಯನ್ನು ವಿರೋಧಿಸಿ ಐಟಿ ಕನ್ನಡಿಗರು ಟ್ವಿಟ್ಟರ್ ಅಭಿಯಾನವನ್ನು ಆಯೋಜಿಸಿದ್ದು ಬೆಂಗಳೂರಿನಲ್ಲಿ ನಂಬರ್ 1 ಟ್ರೆಂಡಿಂಗ್ ಟಾಪಿಕ್ ಆಗಿದೆ.
ಬನವಾಸಿ ಬಳಗವು ಈ ಟ್ವಿಟರ್ ಅಭಿಯಾನವನ್ನು ಆಯೋಜಿಸಿದ್ದು, #NammaMetroHindiBeda ಹಾಗೂ #nammametrokannadasaaku ಹ್ಯಾಷ್ ಟ್ಯಾಗ್ ಬಳಸಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Advertisement
ಕನ್ನಡ ನಮ್ಮ ನೆಲದ ಭಾಷೆ, ನೆಲದ ಭಾಷೆಯಲ್ಲಿ ಕನ್ನಡ ಯಾಕಿಲ್ಲ? ಚುನಾಯಿತ ಪ್ರತಿನಿಧಿಗಳೇ ನಿಮ್ಮ ದೆಹಲಿಯ ಗುಲಾಮಗಿರಿಯನ್ನು ಬಿಟ್ಟು ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಗಮನ ನೀಡಿ ಎಂದು ಜನರು ರಾಷ್ಟ್ರೀಯ ಪಕ್ಷಗಳ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ.
Advertisement
ನಮ್ಮ ಮೆಟ್ರೋ ನಮ್ಮದಾಗೇ ಉಳಿಯಬೇಕು ಎಂದರೆ ಅಲ್ಲಿ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಹೇರಿಕೆಯ ಪ್ರಮಾಣ ತಗ್ಗಿದೆ, ಆದರೆ ನಿಂತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ, ಮೆಟ್ರೋ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಈ ಅಭಿಯಾನವನ್ನು ಆಯೋಜಿಸಲಾಗಿದೆ.
Advertisement
ಡಬ್ಬಿಂಗ್ ಬ್ಯಾನ್, ಕಟ್ಟಪ್ಪದಂತಹ ವಿಷಯವೇ ಅಲ್ಲದ ವಿಷಯಕ್ಕೆ ಬಂದ್ ಅನ್ನುವ ಪುಣ್ಯಾತ್ಮರೆಲ್ಲ ಮೆಟ್ರೊ ಹಿಂದಿ ಹೇರಿಕೆಯ ಬಗ್ಗೆ ಮೌನವಾಗಿದ್ದಾರೆ. #NammaMetroHindiBeda
— ವಸಂತ | Vasant Shetty (@vasantshetty81) June 20, 2017
Advertisement
#nammametrohindibeda @uavasanthrao @CMofKarnataka @nammahdk @BSYBJP seen in yeshwantpura metro stn . Is this namma metro as name suggests? pic.twitter.com/U9QFAGIwih
— Mohan Murthy (@mohannmurthy) June 20, 2017
Madrid metro only 2 languages, Chennai, Delhi metro only 2 langs, wonder why 3 langs in BLR metro. #nammametrohindibeda pic.twitter.com/yo3HePTpYh
— ಬಾಬು ಅಜಯ್। Babu Ajay (@Babuajay316) October 19, 2016
ನಮ್ಮ ಮೆಟ್ರೊದಲ್ಲಿ ಅವರ ಹಿಂದಿ ಏಕೆ ಸ್ವಾಮಿ. ದಿಲ್ಲಿಯಲ್ಲು ಕನ್ನಡಿಗರಿದ್ದಾರೆ ಹಾಗಂತ ಅಲ್ಲಿ ಕನ್ನಡ ಇದ್ಯಾ.#NammaMetroHindiBeda
— Mahಈಶ (@MaheshBSV) September 20, 2016
https://twitter.com/vivek_shankar15/status/877157891693727744
ನಮ್ಮ ಮೆಟ್ರೋಲಿ ಕರ್ನಾಟಕದ ಆಡಳಿತ ಭಾಷೆಗಳಿಗೆ ಸ್ಥಾನ ಇರೋದು ನ್ಯಾಯ! ಹಿಂದೀ ನಮ್ಮ ನಾಡಿನ ಆಡಳಿತ ಭಾಷೆಯಲ್ಲ !#NammaMetroHindiBeda
— ಆನಂದ್ ಗು_Anand G (@Anand_GJ) June 20, 2017
https://twitter.com/hariprasadholla/status/877042262928105473
Difference between Delhi metro & Bengaluru metro. Non Hindi lands are not colonies of Delhi #NammaMetroHindiBeda @CMofKarnataka pic.twitter.com/ljKnoTHaPQ
— Navaneeth Gowda | ನವನೀತ್ ಗೌಡ (@NavaneethGowda1) June 20, 2017
ಎಲ್ಲಾ ಕಡೆಯೂ ಹಿಂದಿಯಲ್ಲಿ ಸೇವೆ ಕೊಡುವುದಕ್ಕೇನು ಈ ದೇಶ ಹಿಂದಿ ಭಾಷಿಗರ ದೇಶವಲ್ಲ…ಅವರಿಗೆ ಮಾತ್ರ ಈ ದೇಶವಲ್ಲ. #NammaMetroHindiBeda
— ಶಶಿ ಕುಮಾರ್ ಡಿ | Shashi Kumar D (@beingmysurean) September 20, 2016
https://twitter.com/YadhunandanAT/status/777918747063353344
ನಮ್ಮ ಮೆಟ್ರೋಲಿ ಹಿಂದೀ ಒಪ್ಪಿದರೆ ನಮ್ಮೂರಿಗೆ ಹಿಂದೀ ಜನರ ವಲಸೆ ಹೆಚ್ಚುತ್ತೆ. ಇಂಗ್ಲೀಶ್ ಇದ್ದರೆ ಇಂಗ್ಲೀಶರ ವಲಸೆ ಆಗುತ್ತಾ? #NammaMetroHindiBeda
— ಆನಂದ್ ಗು_Anand G (@Anand_GJ) June 20, 2017