ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತೊಂದು ಕಠೋರ ನಿಯಮಕ್ಕೆ ತಾಲಿಬಾನ್ ಸರ್ಕಾರ (Taliban) ಮುಂದಾಗಿದೆ. ದೇಶದಲ್ಲಿ ಎಲ್ಲಾ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳು ಹಾಗೂ ಎನ್‌ಜಿಒಗಳಿಂದ ಮಹಿಳಾ ಉದ್ಯೋಗಿಗಳನ್ನು ಕೈಬಿಡಲು ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಮಹಿಳೆಯರನ್ನು ನೇಮಿಸಿಕೊಂಡರೆ ಅಂತಹ ಸಂಸ್ಥೆಗಳನ್ನು ಮುಚ್ಚುವುದಾಗಿ ಹೇಳಿದೆ.
وزارت اقتصاد منحیث مرجع ثبت و راجستر موسسات غیر امارتی، مسولیت انسجام، رهبری و نظارت تمامی فعالیت های انجو های داخلی و خارجی را به عهده دارد.
بناً یکبار دیگر طی متحدالمال تعقیبی در مورد توقف کار طبقه اناث در موسسات غیر امارتی داخلی و خارجی هدایت داده شده است. در صورت عدم همکاری… pic.twitter.com/kqiW7Re3an
— Ministry of Economy-Afghanistan (@economy_af) December 29, 2024
Advertisement
ಅಫ್ಘಾನಿಸ್ತಾನದ ಆರ್ಥಿಕ ಸಚಿವಾಲಯ ಈ ಬಗ್ಗೆ ಎಕ್ಸ್‌ನಲ್ಲಿ ಆದೇಶ ಪ್ರತಿಯನ್ನು ಪ್ರಕಟಿಸಿದೆ. ಆದೇಶದ ಅನ್ವಯ ವಿದೇಶಿ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳ ಕೆಲಸವನ್ನು ಕೂಡಲೇ ನಿಲ್ಲಿಸಲು ಸೂಚಿಸಲಾಗಿದೆ. ಈ ನಿಯಮ ಅನುಸರಿಸಲು ವಿಫಲವಾದರೆ NGO ಹಾಗೂ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
Advertisement
Advertisement
ಅಫ್ಘಾನ್ ಮಹಿಳೆಯರನ್ನು ಉದ್ಯೋಗದಿಂದ ಅಮಾನತುಗೊಳಿಸುವಂತೆ ತಾಲಿಬಾನ್ ಎನ್‌ಜಿಒಗಳಿಗೆ ಹೇಳಿದ ಎರಡು ವರ್ಷಗಳ ನಂತರ ಈ ಆದೇಶ ಬಂದಿದೆ. ಹಿಜಬ್ ಸರಿಯಾಗಿ ಧರಿಸದ ಕಾರಣ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ತಾಲಿಬಾನ್ ಸರ್ಕಾರ ಈಗಾಗಲೇ ಅನೇಕ ಉದ್ಯೋಗ ಮತ್ತು ಬಹುತೇಕ ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿದೆ. ಆರನೇ ತರಗತಿಯ ನಂತರದ ಶಿಕ್ಷಣದಿಂದಲೂ ಹೆಣ್ಣುಮಕ್ಕಳನ್ನು ಹೊರಗಿಡಲಾಗಿದೆ.