ವಾಷಿಂಗ್ಟನ್: ವಿಶ್ವಕೋಶ ಎಂದೇ ಬಿಂಬಿತವಾಗಿರುವ ವಿಕಿಪೀಡಿಯನ್ನು (Wikipedia) ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಎಂದು ಟೆಸ್ಲಾ, ವಿಶ್ವದ ನಂಬರ್ ಶ್ರೀಮಂತ ಉದ್ಯಮಿ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಬಹಿರಂಗ ಕರೆ ನೀಡಿದ್ದಾರೆ.
ʼPiratewiresʼ ನಲ್ಲಿ ಪ್ರಕಟವಾದ ತನಿಖಾ ವರದಿಯನ್ನು ಪೋಸ್ಟ್ ಮಾಡಿ ವಿಕಿಪೀಡಿಯಗೆ ದೇಣಿಗೆ ಕೊಡಬೇಡಿ ಎಂದು ಹೇಳಿದ್ದಾರೆ. ಇಸ್ರೇಲ್ (Israel) ಮತ್ತು ಹಮಾಸ್ (Hamas) ಉಗ್ರರ ನಡುವಿನ ಯುದ್ಧವನ್ನು ಯಾವ ರೀತಿ ತೋರಿಸಲಾಗಿದೆ ಎಂಬ ಸುದ್ದಿಯನ್ನು ಶೇರ್ ಮಾಡಿ ಮಸ್ಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
Wikipedia is controlled by far-left activists.
People should stop donating to them. https://t.co/Cjq2diadFY
— Elon Musk (@elonmusk) October 25, 2024
ವರದಿಯಲ್ಲಿ ಏನಿದೆ?
ವಿಕಿಪೀಡಿಯದ 40 ಸೂಪರ್ ಸಂಪಾದಕರು ಇಸ್ರೇಲ್ ವಿರುದ್ಧ ಮತ್ತು ಹಮಾಸ್ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ಎಡಿಟ್ ಮಾಡಲಾಗುತ್ತಿದೆ.
Advertisement
ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು Piratewires ದಾಖಲೆಗಳೊಂದಿಗೆ ವರದಿ ಪ್ರಕಟಿಸಿತ್ತು. ಇದನ್ನೂ ಓದಿ: ನಿಮಗೆ ಇಷ್ಟವಾಗದೇ ಇದ್ರೆ ಭಾರತದಲ್ಲಿ ಕೆಲಸ ಮಾಡಬೇಡಿ – ವಿಕಿಪೀಡಿಯಗೆ ಹೈಕೋರ್ಟ್ ಎಚ್ಚರಿಕೆ
Advertisement
ಭಾರತದಲ್ಲೂ ಟೀಕೆ:
ವಿಕಿಪೀಡಿಯಾ ಬಗ್ಗೆ ಭಾರತದಲ್ಲೂ ಆಕ್ಷೇಪ ವ್ಯಕ್ತವಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ (ANI) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ವಿಕಿಪೀಡಿಯಗೆ ನ್ಯಾಯಾಂಗ ನಿಂದನೆ ನೋಟಿಸ್ (Contempt of Court) ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಎಎನ್‌ಐಗೆ ಸಂಬಂಧಿಸಿದ ಪೇಜ್ ಎಡಿಟ್ ಮಾಡದಂತೆ ಸೂಚಿಸಿದೆ.
ತನ್ನನ್ನು ಭಾರತ ಸರ್ಕಾರದ ಪ್ರಚಾರ ಸಾಧನ (The Propaganda Tool) ಎಂದು ಉಲ್ಲೇಖಿಸಿದ್ದನ್ನು ಪ್ರಶ್ನಿಸಿ ಎಎನ್‌ಐ ಕೋರ್ಟ್ ಮೊರೆ ಹೋಗಿ ವಿಕೀಪಿಡಿಯಾ ವಿರುದ್ಧ 2 ಕೋಟಿ ರೂ. ಮಾನನಷ್ಟ ಕೇಸ್ ಹೂಡಿದೆ. ಅ.25ರ ಅರ್ಜಿ ವಿಚಾರಣೆ ವೇಳೆ, ಯಾರು ಬೇಕಾದರೂ ಪೇಜ್ ತಿದ್ದಬಹುದೇ? ಎಲ್ಲರಿಗೂ ಎಡಿಟಿಂಗ್ ಮಾಡಲು ಅವಕಾಶ ನೀಡುವುದಾದರೆ ಅದು ಯಾವ ರೀತಿಯ ಪೇಜ್? ಮುಕ್ತ ಎಡಿಟಿಂಗ್ ಆಯ್ಕೆ ಅಪಾಯಕಾರಿ ಎಂದು ವಿಕೀಪಿಡಿಯಾವನ್ನು ತರಾಟೆಗೆ ತೆಗೆದುಕೊಂಡಿತ್ತು.
ತನ್ನ ಪೇಜ್ ಅನ್ನು ಎಡಿಟ್ ಮಾಡಿದ ಮೂವರ ಹೆಸರನ್ನು ಬಹಿರಂಗ ಪಡಿಸುವಂತೆ ವಿಕಿಪೀಡಿಯಾಗೆ ಸೂಚಿಸಿತ್ತು. ತನ್ನ ನೋಟಿಸ್‌ಗೆ ವಿಕಿಪೀಡಿಯಾ ಉತ್ತರ ನೀಡದ್ದಕ್ಕೆ ಈಗ ಎಎನ್‌ಐ ಕೋರ್ಟ್ ಮೊರೆ ಹೋಗಿದೆ.
2001 ರಲ್ಲಿ ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಅವರು ವಿಕಿಪೀಡಿಯವನ್ನುಸ್ಥಾಪಿಸಿದ್ದಾರೆ. ವಿಕಿಮೀಡಿಯಾ ಫೌಂಡೇಶನ್‌ನಿಂದ ಇದು ನಡೆಯುತ್ತಿದ್ದು ಅಮೆರಿಕ ಮತ್ತು ಫ್ರಾನ್ಸಿನಲ್ಲಿ ನೆಲೆಗೊಂಡಿದೆ. ವಿಶ್ವಾದ್ಯಂತ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ವಿಕಿಪೀಡಿಯ ಪುಟದಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ.