ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, ಬಂಜಾರಾ ಸಮುದಾಯ ಹಾಗೂ ಸಕಲ ಹಿಂದೂ ಸಮಾಜದ ವತಿಯಿಂದ ಕರೆ ನೀಡಲಾದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದಾರೆ.
ನಗರದ ಬಂಜಾರಾ ಸಮುದಾಯದ ಭವನದಿಂದ ಪಾದಯಾತ್ರೆ ಮೂಲಕ ಡಿಸಿ ಕಚೇರಿವರೆಗೆ ಆಗಮಿಸಿದ ಪ್ರತಿಭಟನಾಕಾರರು, ವೇಳೆಯಲ್ಲಿ ಇಬ್ಬರು ಕಿಡಿಗೇಡಿಗಳು ಡಿಸಿ ಕಚೇರಿ ಮುಂಭಾಗದಲ್ಲಿದ್ದ ಅಂಗಡಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ʻಒಂದು ರಾಷ್ಟ್ರ ಒಂದು ಚುನಾವಣೆʼ ಸನ್ನಿಹಿತನಾ? – ಈ ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಪ್ಲಾನ್!
ಇನ್ನೂ ಪ್ರತಿಭಟನೆ ವೇಳೆ ಅಲ್ಲೆ ಡಿಸಿ ಕಚೇರಿಯ ಪಕ್ಕದಲ್ಲಿದ, ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಅವರದ್ದೆ ಕಾರಿನ ಮೇಲೆ ಕೂಡ ಕಲ್ಲು ತೂರಾಟ ಮಾಡಲಾಗಿದ್ದು, ಕಾರಿನ ಗಾಜು ಕೂಡ ಪುಡಿಪುಡಿಯಾಗಿದೆ.
ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ವಿಷಯ ಆಂದೋಲಾ ಶ್ರೀಗಳಿಗೆ ತಿಳಿದಾಗ, ನಾವೇ ನಮ್ಮ ಹೋರಾಟಗಾರರ ಮೇಲೆ ಕಲ್ಲು ತೂರಾಟ ಮಾಡಿದ್ದು ಎಷ್ಟು ಸರಿ ಎಂಬುದು ನೀವು ಅರ್ಥ ಮಾಡಿಕೊಂಡು ಮುಂದೆ ನಡೆಯರಿ ಎಂದು ತಿಳಿ ಹೇಳಿದರು. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!