ಭೋಪಾಲ್: ದಲಿತ ವ್ಯಕ್ತಿಯೊಬ್ಬರ ಮದುವೆ ಸಮಾರಂಭದ ಮೆರವಣಿಗೆ ವೇಳೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಮೂವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯಲ್ಲಿ ನಡೆದಿದೆ.
ರಾತ್ರಿ 11 ಗಂಟೆ ಸುಮಾರಿಗೆ ಜಿರಾಪುರದ ಮಸೀದಿಯೊಂದರ ಹೊರಗೆ ಮೆರವಣಿಗೆ ಸಾಗುತ್ತಿದ್ದಾಗ ಮ್ಯೂಸಿಕ್ ನಿಲ್ಲಿಸುವಂತೆ ಕೆಲವು ದುಷ್ಕರ್ಮಿಗಳು ರಂಪಾಟ ಮಾಡಿದ್ದಾರೆ. ಹೀಗಾಗಿ ಕೆಲಕಾಲ ಮ್ಯೂಸಿಕ್ ನಿಲ್ಲಿಸಲಾಗಿತ್ತು. ಆದರೆ ಕೆಲವು ನಿಮಿಷಗಳ ಬಳಿಕ ಮತ್ತೆ ಮ್ಯೂಸಿಕ್ ಪ್ಲೇ ಮಾಡಿದಾಗ, ಅನೇಕ ಮಂದಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ್ರೆ ತಾನೇ ಕೊಟ್ಟ ಭರವಸೆ ಈಡೇರಿಸುವುದು: ಬಿ.ಸಿ.ಪಾಟೀಲ್
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಅಂಕಿತ್ ಮಾಳವಿಯಾ, ಮಸೀದಿ ಮುಂದೆ ಮದುವೆ ಮೆರವಣಿಗೆ ಹೋಗುವಾಗ ಮ್ಯೂಸಿಕ್ ನಿಲ್ಲಿಸುವಂತೆ ಹೇಳಿದರು. ಕೊಂಚ ನಿಮಿಷಗಳ ನಂತರ ಮತ್ತೆ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ವರ, ಬ್ಯಾಂಡ್ ಬಾರಿಸುವವರು ಮತ್ತು ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ – 1,000 ರೂ. ದಾಟಿದ LPG ಸಿಲಿಂಡರ್ ದರ
Advertisement
ಮಸೀದಿ ಎದುರಿಗೆ ಯಾವುದೇ ಮ್ಯೂಸಿಕ್ ಹಾಕಬಾರದು ಎಂಬ ಸಂಪ್ರದಾಯವಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದರು. ಹೀಗಾಗಿ ಮಸೀದಿಯಿಂದ ಮುಂದೆ ಹೋಗಿ ಮ್ಯೂಸಿಕ್ ಹಾಕಿದೆವು. ಈ ವೇಳೆ ತೊಂದರೆ ನಮಗೆ ನೀಡಿದ್ದಾರೆ ಎಂದಿದ್ದಾರೆ. ಸದ್ಯ ಘಟನೆ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿರಾಪುರ ಪೊಲೀಸ್ ಠಾಣೆಯ ಪ್ರಭಾತ್ ಗೌಡ್ ಹೇಳಿದ್ದಾರೆ.