ಚೆನ್ನೈ: ತಮಿಳುನಾಡಿನ (Tamil Nadu) ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದ ಅರಣ್ಯ ಸಚಿವ ಪೊನ್ಮುಡಿ (Ponmudy) ಮೇಲೆ ಜನರು ಕೆಸರು ಎರಚಿ ಕಲ್ಲು ತೂರಿರುವ ಘಟನೆ ನಡೆದಿದೆ.
ಅರಣ್ಯ ಸಚಿವ ಪೊನ್ಮುಡಿ, ಅವರ ಪುತ್ರ ಗೌತಮ ಸಿಕಾಮಣಿ ಮತ್ತು ಜಿಲ್ಲಾಧಿಕಾರಿ ಪಳನಿ ಇರುವೆಲ್ಪಟ್ಟು, ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದರು. ಅತಿವೃಷ್ಟಿ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಹತಾಶರಾದ ಸಾರ್ವಜನಿಕರು, ಸಚಿವರು ಮತ್ತು ಅವರ ಪುತ್ರ ಹಾಗೂ ಜಿಲ್ಲಾಧಿಕಾರಿ ಮೇಲೆ ಕೆಸರು ಎರಚಿ ಭಾರಿ ಗಲಾಟೆ ನಡೆಸಿದರು. ಇದನ್ನೂ ಓದಿ: ತಿರುವಣ್ಣಾಮಲೈನಲ್ಲಿ ಭೂಕುಸಿತಕ್ಕೆ 7 ಮಂದಿ ಬಲಿ – ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ
Advertisement
Advertisement
ಇರುವೇಲ್ಪಟ್ಟು ಪ್ರದೇಶದ ತಿರುಚಿರಾಪಳ್ಳಿ-ಚೆನ್ನೈ ರಸ್ತೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅರಣ್ಯ ಸಚಿವ ಪೊನ್ಮುಡಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಸ್ಥಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸದೆ ತಮ್ಮ ವಾಹನದಲ್ಲೇ ಕುಳಿತು ಸಚಿವರು ಮಾತನಾಡಿಸಿದ್ದಕ್ಕೆ ಜನರು ಸಿಟ್ಟಿಗೆದ್ದರು. ಕೆಲವರು ಸಚಿವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಸರ್ಕಾರ ಕೇವಲ ಚೆನ್ನೈನತ್ತ ಗಮನಹರಿಸಿ ಇತರೆ ಜಿಲ್ಲೆಗಳನ್ನು ನಿರ್ಲಕ್ಷಿಸಿದೆ. ಹಲವು ಜಿಲ್ಲೆಗಳು ವ್ಯಾಪಕ ಹಾನಿ ಹಾಗೂ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರವಾಹ ಬಿಕ್ಕಟ್ಟಿನ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಹೊಂದಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Fengal Cyclone| ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯ – ಕೊಚ್ಚಿ ಹೋಯ್ತು ವಾಹನಗಳು