ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಾಟ (Stone pelting) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಾಂತಿನಗರದ ಸುಹೇಲ್ @ ಸೈಯದ್ ಸುಹೇಲ್, ಅಯಾನ್ ಬಿನ್ ಜಬೀವುಲ್ಲಾ, ಕಲೀಲ್ ಪಾಷಾ, ಗೌಸಿಯಾ ನಗರ ಸೈಯದ್ ಸಾದಿಕ್ ಬಿನ್ ನವೀದ್, ಏಜಾಜ್ ಬಿನ್ ಅಬ್ದುಲ್ ವಾಜೀದ್, ರಾಜೀವ್ ನಗರದ ಸಾದಿಕ್ ಪಾಷ್ @ ಸಾದಿಕ್ ಬಿನ್ ಖಾಲಿದ್ ಪಾಷಾ, ಅರ್ಬಾಜ್ ಷರೀಫ್ s/o ಇಕ್ಬಾಲ್ ಶರೀಫ್, ಶೋಯಬ್ ಪಾಷಾ s/o ಮಜೀದ್ ಪಾಷಾ ಅವರನ್ನ ಬಂಧಿಸಿದ್ದು, ಮತ್ತಷ್ಟು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದೇ ಫೆ.10ರಂದು ತಡರಾತ್ರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರು ತಲ್ಲು ತೂರಾಟ ನಡೆಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಸೇರಿದಂತೆ 14 ಪೊಲೀಸರು ಗಾಯಗೊಂಡಿದ್ದರು. 10ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂ ಆಗಿದ್ದವು. ಇದನ್ನೂ ಓದಿ: ಮೈಸೂರು: ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಠಾಣೆ ಮೇಲೆಯೇ ಕಲ್ಲು ತೂರಾಟ – 14 ಪೊಲೀಸರಿಗೆ ಗಾಯ
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಿಡಿಗೇಡಿಗಳ ಗುರುತು ಪತ್ತೆಗೆ ಮುಂದಾಗಿದ್ದರು. ಅಲ್ಲದೇ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದ ದೃಶ್ಯಾವಳಿಗಳನ್ನೂ ಪರಿಶೀಲಿಸಿ, ಆರೋಪಿಗಳ ಗುರುತು ಪತ್ತೆ ಮಾಡಿದರು. ನಂತರ ಕಲ್ಲು ತೂರಾಟ ನಡೆಸಿದವರ ಹೆಸರುಗಳನ್ನ ಪಟ್ಟಿ ಮಾಡಿ ಅರೋಪಿಗಳನ್ನ ಬಂಧನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ನಾನು ಓದಿರೋದು 10ನೇ ತರಗತಿ, ಮುಡಾ ಕೇಸ್‌ನಲ್ಲಿ ನಾನೇ ವಾದ ಮಾಡ್ತೀನಿ: ಸ್ನೇಹಮಹಿ ಕೃಷ್ಣ