ಹೋಳಿ ಸಂಭ್ರಮದಲ್ಲೂ ಕೆಎಸ್‍ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಿದ ಮರಾಠಿ ಪುಂಡರು

Public TV
1 Min Read
ksrtc bus

ಚಿಕ್ಕೋಡಿ: ಕೆಎಸ್‍ಆರ್‌ಟಿಸಿ (KSRTC) ಬಸ್ ಮೇಲೆ ಮರಾಠಿ ಪುಂಡರು ಕಲ್ಲು ತೂರಾಟ ನಡೆಸಿದ ಘಟನೆ ಮಹಾರಾಷ್ಟ್ರದ (Maharashtra) ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯಲ್ಲಿ ನಡೆದಿದೆ.

ಹೋಳಿ ಬಣ್ಣ ಎರಚುವ ವೇಳೆ ಬಸ್‌ ಹಾಗೂ ಇತರ ವಾಹನಗಳಿಗೆ ಮಸಿ ಎರಚಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಮೂಲಕ ಹೋಳಿ ಹಬ್ಬದ ಸಂಭ್ರಮದಲ್ಲೂ ಪುಂಡರು ಕಿಡಿಗೇಡಿತನ ಮೆರೆದಿದ್ದಾರೆ. ಬಸ್ ಇಚಲಕರಂಜಿಯಿಂದ ಚಿಕ್ಕೋಡಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕನ್ನಡ ಮಾತಾಡು ಎಂದಿದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಇದೇ ಕಾರಣಕ್ಕೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ (Maharashtra) ಸಂಚರಿಸುವ ಬಸ್‌ಗಳನ್ನು (Karnatak Bus) ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದಾರೆ. ಅಲ್ಲದೇ ಉದ್ಧವ್ ಠಾಕ್ರೆ ಬಣದ ಶಿವಸೇನೆ (Shiv Sena) ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದಿದ್ದರು.

ಇಷ್ಟೇ ಅಲ್ಲದೇ ಮಹಾರಾಷ್ಟ್ರದ ಪುಣೆಯ ಸ್ವಾರಗೇಟ್‌ನಲ್ಲಿ KSRTC ಅಂಬಾರಿ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟಿಕೆ ಪ್ರದರ್ಶಿಸಿದ್ದಾರು. ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದರು.

Share This Article