ಬಾಲಿವುಡ್ ನ ಹೆಸರಾಂತ ನಟ ಇಮ್ರಾನ್ ಹಶ್ಮಿ (Emraan Hashmi), ಮೂರು ದಿನಗಳಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದರು. ‘ಗ್ರೌಂಡ್ ಜೀರೊ’ ಸಿನಿಮಾದ ಶೂಟಿಂಗ್ ಗಾಗಿ ಅವರು ಅಲ್ಲಿದ್ದರು. ಎರಡು ದಿನಗಳಿಂದ ಸತತ ಈ ಸಿನಿಮಾದ ಚಿತ್ರೀಕರಣ ನಡೆಯಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಏಕಾಏಕಿಯಾದ ಈ ದಾಳಿ ಕಂಡು ಇಮ್ರಾನ್ ಆಘಾತಗೊಂಡಿದ್ದಾರೆ.
Advertisement
ಕಾಶ್ಮೀರದ (Kashmir) ಪಹಲ್ಗಾಂನಲ್ಲಿ ಇಮ್ರಾನ್ ಹಶ್ಮಿ ನಟನೆಯ ಗ್ರೌಂಡ್ ಜೀರೊ (Ground Zero) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ಸಿನಿಮಾದ ಶೂಟಿಂಗ್ (Shooting) ಮುಗಿಸಿಕೊಂಡು ಪಹಲ್ಗಾಂ ಮಾರುಕಟ್ಟೆಗೆ ಇಮ್ರಾನ್ ಬಂದಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ (Stone pelting) ಮಾಡಲಾಗಿದೆ. ಏಕಾಏಕಿ ನಡೆದ ಈ ದಾಳಿಗೆ ಇಮ್ರಾನ್ ಶಾಕ್ ಗೆ ಒಳಗಾಗಿದ್ದಾರೆ. ಯಾರು ಇದನ್ನು ಮಾಡಿದ್ದು, ಯಾಕೆ ಕಲ್ಲು ತೂರಾಟ ಮಾಡಿದರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ
Advertisement
Advertisement
ಇಮ್ರಾನ್ ಮೇಲೆ ದಾಳಿ ಆಗುತ್ತಿದ್ದಂತೆಯೇ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಮೇಲೆ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು (Police) ಬಲೆ ಬೀಸಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement