ಶಿವಮೊಗ್ಗ: ನಾವು ಮಾತು ತಪ್ಪಿದ್ರೆ ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕಬೇಕಿತ್ತು. ನಿಮಗೆ ಗೊತ್ತಲ್ಲಾ ನಾವು ಎಂತಹವರು ಅಂತಾ? ಒಂದೋ ನಾವು ಸಾಯಬೇಕು ಇಲ್ಲಾ ಅವರು ಸಾಯಬೇಕು ಎನ್ನುತ್ತ ಶಿವಮೊಗ್ಗದಲ್ಲಿ (Shivamogga) ಕಲ್ಲುತೂರಾಟಕ್ಕೆ (Stone Pelting) ಸಂಬಂಧಿಸಿದಂತೆ ಕಿಡಿಗೇಡಿಯೊಬ್ಬ ಪೊಲೀಸರಿಗೆ (Police) ಆವಾಜ್ ಹಾಕಿರುವ ವೀಡಿಯೋ ತುಣುಕೊಂದು ಇದೀಗ ಬೆಳಕಿಗೆ ಬಂದಿದೆ.
Advertisement
ಶಿವಮೊಗ್ಗದ ರಾಗಿಗುಡ್ಡದಲ್ಲಿ (Ragigudda) ಶನಿವಾರ ಈದ್ ಮಿಲಾದ್ ಮೆರವಣಿಗೆ ವೇಳೆ ಉದ್ವಿಗ್ನತೆ ಉಂಟಾಗಿತ್ತು. ಕಲ್ಲುತೂರಾಟ, ಗಲಾಟೆ ಆರಂಭವಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ ದಾಳಿ ಮಾಡಿದ್ದರು. ಗುಂಪುಗೂಡಿ ಮನೆಗಳು ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೂ ದಾಳಿ ನಡೆಸಿದ್ದರು.
Advertisement
Advertisement
ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಈ ಘಟನೆ ರಾತ್ರಿ ನಡೆದಿದ್ದರೆ ಅಂದು ಸಂಜೆ ಪುಂಡ ಯುವಕರು ಪೊಲೀಸರಿಗೆ ಅವಾಜ್ ಹಾಕಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಅದೇ ಯುವಕರು ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿರುವುದು ಬೇರೆ ವೀಡಿಯೋಗಳಲ್ಲಿಯೂ ಕಾಣಿಸಿಕೊಂಡಿದೆ. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?
Advertisement
ನಿಮಗೆ ಬೆಲೆ ಕೊಟ್ಟು ನಾವು ಏನೂ ಮಾಡಿಲ್ಲ. ನಾವು ಗಣಪತಿ ಹಬ್ಬಕ್ಕೂ ಏನೂ ಮಾಡಿಲ್ಲ. ನಾವು ಮಾತು ತಪ್ಪಿದ್ರೆ ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕಬೇಕಿತ್ತು. ನಿಮಗೆ ಗೊತ್ತಲ್ಲಾ ನಾವು ಎಂತಹವರು ಅಂತಾ? ನಾವು ಸಾಯಬೇಕು ಇಲ್ಲವೇ ಅವರು ಸಾಯಬೇಕು ಎಂದು ಪೊಲೀಸರಿಗೇ ಯುವಕನೊಬ್ಬ ಆವಾಜ್ ಹಾಕಿರುವುದು ವೀಡಿಯೋದಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ
Web Stories