ಬಸ್ಸಿಗೆ ಕಲ್ಲು ತೂರಾಟ- ವಿದ್ಯಾರ್ಥಿಗಳಿಬ್ಬರಿಗೆ ಗಾಯ

Public TV
0 Min Read
BUS copy

ಮಂಗಳೂರು: ಕಲ್ಲಡ್ಕ, ವಿಟ್ಲ ವ್ಯಾಪ್ತಿಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕುದ್ರೆಬೆಟ್ಟು, ಪಾಣೆಮಂಗಳೂರು, ಗಡಿಯಾರ ಮತ್ತು ದಾಸಕೋಡಿ ಎಂಬಲ್ಲಿ ಕಲ್ಲು ತೂರಾಟ ನಡೆದಿದೆ. ಪರಿಣಾಮ ನಾಲ್ಕು ಬಸ್ ಗಳಿಗೆ ಹಾನಿಯಾಗಿದ್ದು, ವಿದ್ಯಾರ್ಥಿಗಳಿಬ್ಬರು ಗಾಯಗೊಂಡಿದ್ದಾರೆ.

vlcsnap 2019 06 25 11h17m49s178
ಕೇರಳ ಗಡಿಭಾಗದಲ್ಲಿ ಗೋ ಸಾಗಾಟ ತಡೆದು ತಂಡವೊಂದು ವ್ಯಕ್ತಿಗೆ ಹಲ್ಲೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಕಲ್ಲು ತೂರಾಟ ಮಾಡುವ ಮೂಲಕ ಸಂಘರ್ಷಕ್ಕೆ ಯತ್ನಿಸಲಾಗಿದೆ. ಬಂಟ್ವಾಳ, ಪುತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಲ್ಲೆ ಹಿನ್ನೆಲೆಯಲ್ಲಿ ಬದಿಯಡ್ಕ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಲಾಗಿದೆ.

vlcsnap 2019 06 25 11h17m35s7

Share This Article
Leave a Comment

Leave a Reply

Your email address will not be published. Required fields are marked *