– ಸಣ್ಣ ಸಣ್ಣ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿ
ಮಂಗಳೂರು: ಬೋರ್‌ವೆಲ್ (Borewell) ಕೊರೆಯುತ್ತಿದ್ದ ಲಾರಿ (Lorry) ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಿದ (Stone Pelting) ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಪುರುಷರಕಟ್ಟೆ ಬಳಿ ನಡೆದಿದೆ.
ನೀರಿನ ಫ್ಯಾಕ್ಟರಿಗೆ ಸೇರಿದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನೀರಿನ ಘಟಕದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುವ ಬದಲು ಹೊಸದಾಗಿ ಬೋರ್‌ವೆಲ್ ಕೊರೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ
ಸಣ್ಣ ಸಣ್ಣ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ನೀರಿನ ಘಟಕದವರು ಕೂಡ ಕಲ್ಲು ತೂರಾಟ ಮಾಡಿದ್ದಾರೆ. ಪುತ್ತೂರು ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಹೆರಿಗೆಗೂ ಮುನ್ನ ಲಿಂಗಪರೀಕ್ಷೆ- ಗರ್ಭಪಾತವಾಗಿ ಮಹಿಳೆ ಸಾವು