ಬೆಂಗಳೂರು: ಕ್ವಾರಿ ಮತ್ತು ಕ್ರಷರ್ (Stone crushers) ಸಮಸ್ಯೆಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಷ್ಕರ (Strike) ವಾಪಸ್ ಪಡೆಯುವುದಾಗಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ ಪ್ರಕಟಿಸಿದೆ.
Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಗಣಿ ಸಚಿವ ಹಾಲಪ್ಪ ಆಚಾರ್, ಕಂದಾಯ ಸಚಿವ ಆರ್. ಅಶೋಕ್ ಮತ್ತು ಹಿರಿಯ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಸರ್ಕಾರ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಆಗಲ್ಲ – ಜಲ್ಲಿ ಕೊರತೆ ಇದೆ: BBMP
Advertisement
Advertisement
ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಮುಷ್ಕರ ಕೊನೆಗೊಂಡಿದೆ. ಇದರಿಂದಾಗಿ ಮನೆ ನಿರ್ಮಿಸಲು, ಸರ್ಕಾರದ ನಿರ್ಮಾಣ ಕಾಮಗಾರಿಗಳ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಕೊನೆಗೊಂಡಿದೆ. ವಿಶೇಷವಾಗಿ ಯಲಹಂಕ ವಾಯುನೆಲೆಯಲ್ಲಿ ಜಾಗತಿಕ ವೈಮಾನಿಕ ಪ್ರದರ್ಶನ ಏರ್ ಶೋ ಕಾಮಗಾರಿ ಮೇಲಿನ ಕರಿನೆರೆಳು ನಿವಾರಣೆಯಾಗಿದೆ.
Advertisement
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟೋನ್ ಕ್ರಷರ್ಸ್ & ಕ್ವಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ, ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದೆ. ಎರಡು ಕಡೆಗಳಲ್ಲಿ ರಾಜಧನ ಸಂಗ್ರಹ ಮಾಡುವುದಿಲ್ಲ. ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಮಾಲೀಕರು ಮಾತ್ರವೇ ರಾಜಧನ ಸಂಗ್ರಹಿಸುವ ಕುರಿತು ಭರವಸೆ ನೀಡಿದ್ದಾರೆ. ಹೀಗಾಗಿ ನಾವು ಮುಷ್ಕರ ಹಿಂಪಡೆಯುತ್ತಿದ್ದೇವೆ. ನಾಳೆಯಿಂದ ಎಂದಿನಂತೆ ಕ್ರಷರ್ಸ್‍ಗಳು ಕಾರ್ಯನಿರ್ವಹಿಸಲಿದೆ. ಹದಿನೈದು ದಿನಗಳಲ್ಲಿ ಬೇಡಿಕೆಗಳು ಈಡೇರಲಿವೆ ಎಂದರು. ಇದನ್ನೂ ಓದಿ: ಜೋಶಿಮಠದ ಬಳಿಕ ಕರ್ಣಪ್ರಯಾಗದಲ್ಲಿ ಭೂಮಿ, ಮನೆಯ ಗೋಡೆ ಬಿರುಕು – ಮುಳುಗಡೆ ಭೀತಿ, ಆತಂಕದಲ್ಲಿ ಜನ
ಇಂದಿನಿಂದ ಜಲ್ಲಿ ಕ್ರಷರ್ಸ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಸರ್ಕಾರದ ಭರವಸೆ ಮೇರೆಗೆ ಮುಷ್ಕರ ಹಿಂಪಡೆಯುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಸ್ಟೋನ್ ಕ್ರಷರ್ಸ್ ಅಂಡ್ ಕ್ವಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸಿದ್ದರಾಜು ಮಾತನಾಡಿ, ಸರ್ಕಾರದ ಭರವಸೆಯ ಮೇರೆಗೆ ಮುಷ್ಕರ ಹಿಂಪಡೆಯುತ್ತಿದ್ದೇವೆ. ಮುಷ್ಕರದಿಂದ ವಿಶೇಷವಾಗಿ ಜನ ಸಾಮಾನ್ಯರಿಗೆ ಉಂಟಾದ ತೊಂದರೆಗಳಿಗೆ ವಿಷಾದಿಸುತ್ತೇವೆ ಎಂದು ನುಡಿದರು.
ಬೆಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮಾಶಂಕರ್ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಬಗೆಹರಿಸಬೇಕು. ಉದ್ಯಮವನ್ನು ನಂಬಿರುವ ಲಕ್ಷಾಂತರ ಕುಟುಂಬಗಳ ಹಿತ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k