ಬೆಂಗಳೂರು: ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಯದೇವ ಆಸ್ಪತ್ರೆಗೆ ತೆರಳಿದ್ದು, ಸದ್ಯಕ್ಕೆ ಚೆಕಪ್ ಮಾಡಿಸಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಅನಾರೊಗ್ಯದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಜಯದೇವ ಆಸ್ಪತ್ರೆಗೆ ತೆರಳಿ ಜನರಲ್ ಚೆಕಪ್ ಮಾಡಿದ್ದಾರೆ. ಈ ವೇಳೆ ಹೊಟ್ಟೆ ನೋವು ಇರುವುದರಿಂದ ಎಂಆರ್‍ಐ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರು ಸೂಚಿಸಿದ ಡಾ.ಮಂಜುನಾಥ್ ನೇತೃತ್ವದಲ್ಲಿ ಸಿಎಂ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
Advertisement
ಕಳೆದ ನಾಲ್ಕು ದಿನದ ಹಿಂದೆ ಸಿಎಂ ರೂಟೀನ್ ಚೆಕಪ್ ಗೆ ಜಯದೇವ ಆಸ್ಪತ್ರೆಗೆ ತೆರಳಿದ್ದರು. ವಾಲ್ವ್ ರಿಪ್ಲೇಸ್ ಮೆಂಟ್ ಆಗಿರುವುದರಿಂದ ರೂಟೀನ್ ಚೆಕಪ್ ಮಾಡಿಸಿದ್ದರು. ಆದರೆ ಸ್ವಲ್ಪ ಶುಗರ್ ಕಂಟ್ರೋಲ್ ಮಾಡುವಂತೆ ಸಿಎಂಗೆ ಮೊನ್ನೆಯೇ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಸೂಚನೆ ಕೊಟ್ಟಿದ್ದರು. ಇಂದು ಮತ್ತೆ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗಿದೆ ಎಂದು ಜಯದೇವ ಆಸ್ಪತ್ರೆಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
Advertisement
Advertisement
ದಸರಾ ಬಳಿಕ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಹೊಟ್ಟೆನೋವು ಮತ್ತು ಭೇದಿ ಸಮಸ್ಯೆ ಇತ್ತು. ಇಂದು ತಲೆನೋವು ಸುಸ್ತು ಇದ್ದಿದ್ದರಿಂದ ಆಸ್ಪತ್ರೆಗೆ ಬಂದಿದ್ದರು. ಒಂದು ದಿನ ರೆಸ್ಟ್ ಮಾಡುವಂತೆ ಸೂಚಿಸಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಎಂಆರ್‍ಐ ಮಾಡಿದ್ದೇವೆ ನಾರ್ಮಲ್ ಆಗಿದೆ. ಎಲ್ಲಾ ಪ್ರೊಸಿಜರ್ ಮುಗಿಸಿ ಮನೆಗೆ ತೆರಳಿದ್ದಾರೆ ಎಂದು ಪಬ್ಲಿಕ್ ಟಿವಿಗೆ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
Advertisement
ಸಿಎಂ ಕುಮಾರಸ್ವಾಮಿ ಅವರು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲು ಇದ್ದ ಎಲ್ಲ ಕಾರ್ಯಕ್ರಮಗಳನ್ನ ರದ್ದು ಪಡಿಸಲಾಗಿದೆ. ಸಿಎಂ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸವನ್ನು ಕೈಗೊಳ್ಳಬೇಕಿತ್ತು, ಜೊತೆಗೆ ಧರ್ಮಸ್ಥಳಕ್ಕೂ ಹೋಗಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸವನ್ನು ರದ್ದು ಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv