ಬೆಂಗಳೂರು: ರಾಜ್ಯದಲ್ಲಿ ಎಷ್ಟೇ ಮರಳು ದಂಧೆ ತಡೆಗಟ್ಟಿದರೂ ಒಂದಲ್ಲ ಒಂದು ರೀತಿ ಮರಳು ಮಾಫಿಯಾ ನಡೀತಾನೆ ಇದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ ಮರಳು ಮಾಫಿಯಾವೊಂದು ತಲೆ ಎತ್ತಿದೆ.
ಮರಳಿಗೆ ಕಬ್ಬಿಣ ಕಾರ್ಖಾನೆಯಿಂದ ಬರುವ ತ್ಯಾಜ್ಯವನ್ನು ಮಿಕ್ಸ್ ಮಾಡಿ ಅಪಾರ್ಟ್ ಮೆಂಟ್‍ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಜರಗನಹಳ್ಳಿ ಮರಳು ಅಡ್ಡೆಯಲ್ಲಿ ಈ ಮಿಕ್ಸಿಂಗ್ ಮಾಫಿಯಾ ನಡೆಯುತ್ತದೆ. ಈ ದಂಧೆಯ ಜಾಲದೊಳಗೆ ಪಬ್ಲಿಕ್ ಟಿವಿ ಎಂಟ್ರಿಯಾಗುತ್ತಿದ್ದಂತೆ ಏನೇನಾಯ್ತು?
Advertisement
Advertisement
ಕ್ಲೀನರ್: ಬನ್ನಿ ಪರಿಚಯ ಮಾಡಿಕೊಡುತ್ತೀನಿ, ಇಲ್ಲಿ ಬರುತ್ತಿದ್ದಾರೆ ನೋಡಿ ಕೇಳಿ ಇವರಿಗೆ.
ಪಬ್ಲಿಕ್ ಟಿವಿ: ಇವರಾ?
ಕ್ಲೀನರ್: ರೋಬೋ ಸ್ಯಾಂಡ್ ಬೇಕಂತೆ ಎರಡು ಲೋಡ್ ನೋಡಿ.
ಕಿಂಗ್‍ಪಿನ್ ಮಂಜು: ಕ್ರಾಸಿಂಗಾ? ಕ್ರಾಸಿಂಗ್ ಸ್ಯಾಂಡಾ?
ಪಬ್ಲಿಕ್ ಟಿವಿ: ಹಾ ಎಷ್ಟು? ಎಷ್ಟಾಗತ್ತೆ ಒಂದು ಲೋಡ್.
ಕಿಂಗ್‍ಪಿನ್ ಮಂಜು: ಟನ್ನೇಜ್ ಲೆಕ್ಕ ಸಾರ್ ಅದು.
ಪಬ್ಲಿಕ್ ಟಿವಿ: ಟನ್ನೇಜಾ? ಎಷ್ಟು?
ಕಿಂಗ್‍ಪಿನ್ ಮಂಜು: 2,600 ರೂ.
ಪಬ್ಲಿಕ್ ಟಿವಿ: ಟನ್ ಗಾ? ಟ್ರಾನ್ಸ್ ಪೋರ್ಟ್ ಎಲ್ಲಾ ನಿಮ್ಮದೇನಾ?
ಕಿಂಗ್‍ಪಿನ್ ಮಂಜು: ಹೂಂ ಎಲ್ಲಿಗೆ?
ಪಬ್ಲಿಕ್ ಟಿವಿ: ನಮ್ಮದು ನಾಯಂಡಳ್ಳಿ ಇರುವುದು. ಲಾರಿ ಎಲ್ಲಾ ಅಲ್ಲೇ ಇರೋದು.
ಕಿಂಗ್‍ಪಿನ್ ಮಂಜು: ನೀವು ನಾಯಂಡಳ್ಳಿ ಇರೋದಾ? ಲಾರಿಗೆ ಬೇಕಾ? ಯಾವ ಗಾಡಿ ನಿಮ್ಮದು 709 ಆ?
ಪಬ್ಲಿಕ್ ಟಿವಿ: 709 ಒಂದು ಇದೆ. ಇನ್ನೊಂದು ಸಾಕ್ ನಮಗೆ ಅದೇ. ಇದು ಎಷ್ಟು ಬರುತ್ತೆ ಟನ್ನೇಜ್ ಆದರೆ?
ಕಿಂಗ್‍ಪಿನ್ ಮಂಜು: ಮರಳಾ?
ಪಬ್ಲಿಕ್ ಟಿವಿ: ಇದು ಒಂದು ಲೋಡ್ ಸಿಗುತ್ತದಾ?
ಕಿಂಗ್‍ಪಿನ್ ಮಂಜು: ಮರಳಾ?
ಪಬ್ಲಿಕ್ ಟಿವಿ: ಮರಳಲ್ಲ ಇದು.
ಕಿಂಗ್‍ಪಿನ್ ಮಂಜು: ಈ ತರದ್ದಾ?
ಪಬ್ಲಿಕ್ ಟಿವಿ: ಹಾ.
ಕಿಂಗ್‍ಪಿನ್ ಮಂಜು: ಈ ಗಾಡಿಯಲ್ಲಿ ಬಂದಿರುವುದಾ? ಅದು ಬೇಕಾ? ಯಾವಾಗ ಬೇಕು?
ಪಬ್ಲಿಕ್ ಟಿವಿ: ಒಂದು ಎರಡು ದಿನ
ಕಿಂಗ್‍ಪಿನ್ ಮಂಜು: ಫೋನ್ ಮಾಡಿ ಕಳಿಸಿಕೊಡುತ್ತೀನಿ.
ಪಬ್ಲಿಕ್ ಟಿವಿ: ನಂಬರ್ ಕೊಡಿ ನಿಮ್ಮದು.
ಕಿಂಗ್‍ಪಿನ್ ಮಂಜು: 40 ಟನ್ ಬರುತ್ತೆ ಇದರಲ್ಲಿ
ಪಬ್ಲಿಕ್ ಟಿವಿ: 40 ಟನ್ ಹಿಡಿಯುತ್ತದಾ ಇದು?
ಕಿಂಗ್‍ಪಿನ್ ಮಂಜು: ಬರುತ್ತದೆ ಸಾರ್ 12 ವೀಲ್ ಗಾಡಿ.
ಪಬ್ಲಿಕ್ ಟಿವಿ: ಎಲ್ಲಿ ಸಿಗುತ್ತದೆ ಇದು?
ಕಿಂಗ್‍ಪಿನ್ ಮಂಜು: ಬಳ್ಳಾರಿ
ಪಬ್ಲಿಕ್ ಟಿವಿ: ಓ ಅಲ್ಲಿಂದ ಬರುತ್ತಾ ಇದು.
ಪಬ್ಲಿಕ್ ಟಿವಿ: ನಿರಂತರವಾಗಿ ನಮಗೆ ಡಿಮ್ಯಾಂಡ್ ಇದ್ದ ಹಾಗೆ ಸಪ್ಲೇ ಮಾಡುತ್ತೀರಾ?
ಕಿಂಗ್‍ಪಿನ್ ಮಂಜು: ನಿಮಗೆ ಯಾವಾಗ ಬೇಕಾದರು ಹೇಳಿ..
Advertisement
Advertisement
ಇಷ್ಟು ಆದಮೇಲೆ ಮಿಕ್ಸಿಂಗ್ ಮಾಡುವ ಜಾಗಕ್ಕೆ ಪಬ್ಲಿಕ್ ಟಿವಿ ತಂಡ ಎಂಟ್ರಿ ಕೊಡುತ್ತದೆ. ಅಲ್ಲಿ ಮಿಕ್ಸಿಂಗ್ ಮಾಡುತ್ತಿದ್ದವರನ್ನು ಮಾತನಾಡಿಸಿದಾಗ ಅವರು ಹೇಳಿದ್ದೇನು ನೋಡಿ..
ಪಬ್ಲಿಕ್ ಟಿವಿ: ಇದು ಅದೇನಾ ಅಣ್ಣಾ? ಮಿಕ್ಸ್ ಆಗಿರುವುದಾ ಇದು?
ಲಾರಿ ಸಿಬ್ಬಂದಿ: ಹು ಮಿಕ್ಸ್ ಆಗಿರುವುದು.
ಪಬ್ಲಿಕ್ ಟಿವಿ: ಎಲ್ಲಿ ಬಳ್ಳಾರಿ ಇಂದ ತರುವುದು ನೀವು..?
ಲಾರಿ ಸಿಬ್ಬಂದಿ: ಬೋರಾಪುರದ್ದು.
ಪಬ್ಲಿಕ್ ಟಿವಿ: ಬೋರಾಪುರ..? ಎಲ್ಲಿ ಐತಣ್ಣ ಇದು.
ಲಾರಿ ಸಿಬ್ಬಂದಿ: ಹೊಸಪೇಟೆ
ಪಬ್ಲಿಕ್ ಟಿವಿ: ಹೊಸಪೇಟೆ ಬೋರಾಪುರ?
ಲಾರಿ ಸಿಬ್ಬಂದಿ: ಹಾ
ಪಬ್ಲಿಕ್ ಟಿವಿ: ಎಲ್ಲಿ ಸಿಗುತ್ತದೆ ಅದು ಅಲ್ಲಿ
ಲಾರಿ ಸಿಬ್ಬಂದಿ: ಗೊತ್ತಿಲ್ಲ ಅಣ್ಣ ಡ್ರೈವರ್ ಕೇಳಬೇಕು.
ಪಬ್ಲಿಕ್ ಟಿವಿ: ಯಾವುದರ ಇದು ಪುಡಿ
ಲಾರಿ ಸಿಬ್ಬಂದಿ: ಅದೇನೋ ಪೌಡರು ಗೊತ್ತಿಲ್ಲ. ವೈಟ್ ಸಿಮೆಂಟ್‍ದಂತೆ
ಪಬ್ಲಿಕ್ ಟಿವಿ: ಅಣ್ಣಾ ಇದು ಗೊತ್ತಾಗಲ್ವಾ?
ಕಿಂಗ್‍ಪಿನ್ ಜಗದೀಶ್: ಯಾರು ನೀವು?
ಪಬ್ಲಿಕ್ ಟಿವಿ: ನಮ್ಮದು ನಾಯಂಡಳ್ಳಿಯಲ್ಲಿ ಇದೆ
ಕಿಂಗ್‍ಪಿನ್ ಜಗದೀಶ್: ಏನು?
ಪಬ್ಲಿಕ್ ಟಿವಿ: ಲಾರಿ ಸ್ಟ್ಯಾಂಡು, ಇದನ್ನ ನೋಡಿಕೊಂಡು ಬನ್ನಿ ಮೊದಲು ಅಂದರು.
ಕಿಂಗ್‍ಪಿನ್ ಜಗದೀಶ್: ಯಾರು ಹೇಳಿದ್ದು ನಿಮಗೆ.
ಪಬ್ಲಿಕ್ ಟಿವಿ: ಇಲ್ಲಿಯವರೆ ಲಾರಿಯವರು ಒಬ್ಬರು. ಹಿಂಗಿದೆ ಲಾಭ ಮಾಡಿಕೊಳ್ಳಂಗಿದ್ದರೆ ಮಾಡಿ ಅಂತ. ನಮಗೇನು ಗೊತ್ತಾ? ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳಿಗೆಲ್ಲಾ ಹೊಡಿತೀವಿ.
ಕಿಂಗ್‍ಪಿನ್ ಜಗದೀಶ್: ನಾವು ಅಪಾರ್ಟ್ ಮೆಂಟ್ ಗೆ ಹಾಕುವುದು. ಅದು ಬಂದುಬಿಟ್ಟು ವೇಸ್ಟೇಜ್ ಅಲ್ಲ, ಮಣ್ಣಲ್ಲ ಅದು. ಅದು ಸಿಮೆಂಟ್‍ಗೆ ಹೋಗುವ ಐಟಮ್.
ಪಬ್ಲಿಕ್ ಟಿವಿ: ಏನ್ ವೇಸ್ಟೇಜ್ ಅಣ್ಣಾ ಅದು.
ಕಿಂಗ್‍ಪಿನ್ ಜಗದೀಶ್: ವೇಸ್ಟೇಜ್ ಅಲ್ಲ ಅದು. ಸಿಮೆಂಟ್‍ಗೆ ಹೋಗೋದು ಅದು.
ಪಬ್ಲಿಕ್ ಟಿವಿ: ಸಿಮೆಂಟ್ ಮಾಡುವುದಕ್ಕೆ ಹೋಗುವುದಾ..?
ಕಿಂಗ್‍ಪಿನ್ ಜಗದೀಶ್: ಸಿಮೆಂಟ್ ಇದರಲ್ಲೇ ಮಾಡೋದು. ಎರಡು-ಮೂರು ಐಟಮ್ ಹಾಕುತ್ತಾರೆ. ಮುಖ್ಯವಾಗಿ ಇದನ್ನೇ ಹಾಕುವುದು.
ಪಬ್ಲಿಕ್ ಟಿವಿ: ಯಾವುದರ ವೇಸ್ಟೇಜ್ ಇದು
ಕಿಂಗ್‍ಪಿನ್ ಜಗದೀಶ್: ವೇಸ್ಟೇಜ್ ಅಲ್ಲ ಅದು. ಯಾರು ಹೇಳಿದ್ದು ನಿಮಗೆ.
ಪಬ್ಲಿಕ್ ಟಿವಿ: ಇಲ್ಲಿಯವರೇ ಲಾರಿಯವರು ಒಬ್ಬರು ಅಣ್ಣಾ.
ಕಿಂಗ್‍ಪಿನ್ ಜಗದೀಶ್: ಯಾರು..?
ಪಬ್ಲಿಕ್ ಟಿವಿ: ಅವರ ಹೆಸರು ಏನೋ ಮರೆತೆ. ಇಲ್ಲಿ ಮರಳು ಹಾಕಿಸುವುದಕ್ಕೆ ಬಂದಿದ್ವಿ.
ಎಲ್ಲಾ ಮರಳಿನಲ್ಲೂ ಮಿಕ್ಸಿಂಗ್ ಇದ್ದೇ ಇರತ್ತದೆ. ಆದರೆ ಮಿಕ್ಸಿಂಗ್ ಪ್ರಮಾಣ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತ್ತದೆ. ಒಂದು ಲಾರಿ ಮರಳಿಗೆ ಒಂದು ಲಾರಿ ಸ್ಲಾಗ್ ಹಾಕಿ ಮಿಕ್ಸ್ ಮಾಡಿದ ಮರಳನ್ನ ಬಳಕೆ ಮಾಡೋದು ಡೇಂಜರಸ್ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಪೊಲೀಸ್ ಇಲಾಖೆಯಾಗಲೀ ಅಥವಾ ಕಂದಾಯ ಇಲಾಖೆಯಾಗಲೀ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=vuyy816MtK4