ಬೆಂಗಳೂರು: ಎರಡೂವರೆ ವರ್ಷ ಆದ ನಂತರ ಸಚಿವರ ಬದಲಾವಣೆ ಆಗಬೇಕು ಎಂಬ ಹೇಳಿಕೆಗೆ ಈಗಲೂ ನಾನು ಬದ್ಧ ಎಂದು ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಈ ಕುರಿತು ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ (DCM) ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಅವರು ತೀರ್ಮಾನ ಮಾಡಲಿ. ನಾನು ಆಕಾಂಕ್ಷಿ ಅಲ್ಲ. ನಾನು ಮಾತನಾಡಿ ಗೊಂದಲ ಮಾಡುವುದಿಲ್ಲ. ಎಲ್ಲರಿಗೂ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಸಚಿವರ ಹೈಕಮಾಂಡ್ ಭೇಟಿ ನನ್ನ ಗಮನಕ್ಕೆ ಬಂದಿಲ್ಲ. ನಾನು ಯಾವುದಕ್ಕೂ ಡಿಮ್ಯಾಂಡ್ ಇಟ್ಟಿಲ್ಲ. ನಮ್ಮ ಸಾಮರ್ಥ್ಯ ನೋಡಿ ಹೈಕಮಾಂಡ್ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಈಗಲೂ ಕೂಡ ಎರಡೂವರೆ ವರ್ಷಕ್ಕೆ ಸಚಿವರ ಬದಲಾವಣೆ ಹೇಳಿಕೆಗೆ ಬದ್ಧ. ಸದ್ಯ ಸಚಿವ ಸಂಪುಟ ಬದಲಾವಣೆ ಸದ್ಯಕ್ಕೆ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ4 ಆರೋಪಿ ಪತ್ನಿ ಕಣ್ಣೀರು
Advertisement
Advertisement
ನಾವು ಗುಣಮಟ್ಟದ ಅಕ್ಕಿ ಕೊಡುತ್ತಿದ್ದೇವೆ. ಡಿಬಿಟಿ ಪ್ರತಿ ತಿಂಗಳು ಕೊಡುತ್ತೇವೆ. ಜುಲೈ ತಿಂಗಳ ಹತ್ತಕ್ಕೆ ಯಾವುದೇ ಬಾಕಿ ಇರದೆ ಹಣ ಹಾಕುತ್ತೇವೆ. ಜುಲೈ ಹತ್ತಕ್ಕೆ ಒಂದು ವರ್ಷ ಕಂಪ್ಲಿಟ್ ಆಗುತ್ತೆ. ಯಾವುದೇ ಹಣ ಬಾಕಿ ಇಲ್ಲ. ಅಕ್ಕಿ ಸಕಾಲಕ್ಕೆ ನಾವು ಕೋಡುತ್ತೇವೆ. ಹಣದ ಬದಲು ಅಕ್ಕಿ ಕೊಡಲು ಚರ್ಚೆ ನಡೆದಿದೆ. ಅಕ್ಕಿ ಬದಲು ದವಸ ಧಾನ್ಯಗಳನ್ನು ಕೊಡುವ ಪ್ರಸ್ತಾವನೆ ಇದೆ. ಮತ್ತೆ ಕೇಂದ್ರದ ಬಳಿ ಅಕ್ಕಿ ಕೇಳುತ್ತೇವೆ. ಈಗ ನಮ್ಮ ರಾಜ್ಯದವರೆ ಸಚಿವರಿದ್ದಾರೆ. ಅವರ ಬಳಿ ಪ್ರಸ್ತಾವನೆ ಇಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು ಸಂಸದರಾಗಿ ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕಾರ
Advertisement
Advertisement
ತೈಲ ಬೆಲೆ ಏರಿಕೆ ಬಗ್ಗೆಯೂ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಕಡಿಮೆ ಇದೆ. ಬೆಲೆ ಹೆಚ್ಚಳ ಮಾಡಿದ ಮೇಲೂ ಕಡಿಮೆ ಇದೆ. ಐದಾರು ರೂ. ಈಗಲೂ ಕಡಿಮೆ ಇದೆ. ಗ್ಯಾರಂಟಿಗಳಿಗಾಗಿ ತೈಲ ಬೆಲೆ ಹೆಚ್ಚಳ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬೆಲೆ ಏರಿಕೆ ಕೊಡುಗೆ, ಹಣದುಬ್ಬರ ಏರಿಕೆ – ಇದು ಕಾಂಗ್ರೆಸ್ ಗ್ಯಾರಂಟಿ ಎಂದ ಅಶ್ವಥ್ ನಾರಾಯಣ್