ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಪತ್ತೆ ಮಾಡಲು ಸಿಸಿಬಿ ಪೊಲೀಸರು ಇದೂವರೆಗೂ ಯಶಸ್ವಿಯಾಗಿಲ್ಲ. ಜನಾರ್ದನ ರೆಡ್ಡಿ ಆಂಬಿಡೆಂಟ್ ಡೀಲ್ ಪ್ರಕರಣ ದಾಖಲಾಗುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ನಮಗೆ ಏನೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಇತ್ತ ಬಿಜೆಪಿ ಹೈಕಮಾಂಡ್ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಕುಚುಕು ಗೆಳೆಯ ಶಾಸಕ ಶ್ರೀರಾಮುಲು ಸಹ ನಿಸ್ಸಾಹಯಕರಾಗಿದ್ದಾರೆ.
ಎಲ್ಲಿ ಹೋದ್ರು ರೆಡ್ಡಿ?
ರಾಜ್ಯದಲ್ಲಿ ಬಿಜೆಪಿ ನಾಯಕರು ಕೈ ಕೊಟ್ಟ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶಕ್ಕೆ ಜನಾರ್ದನ ರೆಡ್ಡಿ ತೆರಳಿರುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿಯಂತೆ ನೆರೆಯ ರಾಜ್ಯದಲ್ಲಿಯೂ ಜನಾರ್ದನ ರೆಡ್ಡಿ ಹಲವು ಪ್ರಭಾವಿ ಮುಖಂಡರ ಜೊತೆ ಸಂಪರ್ಕ ಹೊಂದಿದ್ದಾರೆ. ಹಾಗಾಗಿ ಆಂಧ್ರದ ಯಾರಾದರೂ ಪ್ರಭಾವಿ ಮುಖಂಡನ ಮನೆಯಲ್ಲಿ ಜನಾರ್ದನ ರೆಡ್ಡಿ ಆಶ್ರಯ ಪಡೆದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
Advertisement
ಈ ಎಲ್ಲ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಏನು ಮಾಡಬೇಡಿ. ನ್ಯಾಯಾಲಯದಿಂದ ತೀರ್ಪು ಏನು ಬರುತ್ತೆ ಅಂತಾ ಕಾದು ನೋಡೋಣ. ಜಾಮೀನು ಅರ್ಜಿಯ ವಿಚಾರಣೆ ನೋಡಿಕೊಂಡು ಮುಂದಿನ ಪ್ರತಿತಂತ್ರವನ್ನು ರಚಿಸೋಣ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೂಚಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
ಇದೇ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿರುವ ನಾಲ್ವರು ರೆಡ್ಡಿ ಆಪ್ತರ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಗುರುವಾರ ಸಹ ಬಳ್ಳಾರಿಯಲ್ಲಿರುವ ನಿವಾಸ ಮತ್ತು ಮಾವ ಪರಮೇಶ್ವರ್ ರೆಡ್ಡಿಯವರ ಮನೆಯ ಮೇಲೆಯೂ ದಾಳಿ ನಡೆಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews