ಬೆಂಗಳೂರು: ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಇನ್ನೂ ಎರಡು ದಿನ ವರುಣನ ಅಬ್ಬರ ಜೋರಾಗಲಿದೆ.
ಗುಡುಗು, ಮಿಂಚು ಸಹಿತ ಇಂದು ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಸ್ಸಾಂ, ಓಡಿಶಾ, ತೆಲಂಗಾಣ ಮೂಲಕ ಕರ್ನಾಟಕಕ್ಕೆ ವಾಯುಭಾರ ಕುಸಿತದಿಂದ ಮಳೆಯಾಗುತ್ತಿದೆ. ಗಾಳಿ ಸಹಿತ ರಾಜ್ಯ ರಾಜಧಾನಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಆಗಲಿದೆ.
Advertisement
Advertisement
ಬೆಂಗಳೂರು ಅಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಭಾನುವಾರ ರಾತ್ರಿ ಬೆಂಗಳೂರಿನ ಹಲವೆಡೆ ಸುಮಾರು 4 ಸೆಂಟಿ ಮೀಟರ್ ಮಳೆಯಾಗಿದೆ. ಯಲಹಂಕ ಏರ್ ಪೋರ್ಟ್ ಭಾಗದಲ್ಲಿ ಸುಮಾರು 5.1 ಸೆಂಟಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಉಸ್ತುವಾರಿ ಸುಂದರ್ ಮೈತ್ರಿ ಹೇಳಿದ್ದಾರೆ.
Advertisement
ಭಾನುವಾರ ಜೋರಾಗಿ ಮಳೆ ಬಂದ ಕಾರಣ ಹಲವು ರಸ್ತೆಯಲ್ಲಿ ಮರ ಉರುಳಿ ಬಿದ್ದು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಮರಗಳ ತೆರವು ಕಾರ್ಯಚಾರಣೆ ವಿಳಂಬ ಹಿನ್ನಲೆಯಲ್ಲಿ ಬಹುತೇಕ ಕಡೆ ವಾಹನ ಸವಾರರು ಪರದಾಡಿದರು.