ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕಳೆದ ಮೂರು ವರ್ಷದಿಂದ ವಿಘ್ನದ ಮೇಲೆ ವಿಘ್ನ ಬರುತ್ತಿತ್ತು. ಕೋಣಗಳ ಮೇಲೆ ಕಂಬಳದ ಗದ್ದೆಯಲ್ಲಿ ಬೀಳುತ್ತಿದ್ದ ಏಟುಗಳೇ ರಾದ್ಧಾಂತಕ್ಕೆ ಕಾರಣವಾಗಿತ್ತು. ಏಟು ಬೀಳುವ ಬೆತ್ತದ ಮೇಲೆ ಮೃದುವಾದ ಸ್ಪಾಂಜ್‍ನ ಹೊದಿಕೆ ಬಂದಿದೆ. ಓಡುವ ಕೋಣಗಳಿಗೆ ಪೆಟ್ಟು ಬಿದ್ದಾಗ ಸೌಂಡ್ ಬರುತ್ತೆ ಆದ್ರೆ ನೋವಾಗಲ್ಲ.
ಕಂಬಳ ಕರ್ನಾಟಕ ಕರಾವಳಿಯ ವೀರ ಜಾನಪದ ಕ್ರೀಡೆ. ಕಂಬಳದ ಫೋಟೋ, ವಿಡಿಯೋಗಳು ಇಂಟರ್ ನ್ಯಾಶನಲ್ ಲೆವೆಲ್ ನಲ್ಲಿ ಫೇಮಸ್ ಆದ ಮೇಲೆ ಸಿಕ್ಕಾಪಟ್ಟೆ ಸಮಸ್ಯೆಗಳೂ ಕಂಬಳದ ಮೇಲೆ ಆಯಿತು. ಪ್ರಾಣಿದಯಾ ಸಂಘ ಸುಪ್ರೀಂಕೋರ್ಟ್ ಮೆಟ್ಟಲು ಹತ್ತಿ ಕೋಣಗಳ ಓಟವನ್ನು ಒಂದು ವರ್ಷ ನಿಲ್ಲಿಸಿತ್ತು. ಎರಡು ವರ್ಷ ಸಿಕ್ಕಾಪಟ್ಟೆ ಕಂಡೀಶನ್‍ನಲ್ಲಿ ಕಂಬಳ ನಡೆಯಿತು. ಇಷ್ಟಕ್ಕೆಲ್ಲಾ ಕಾರಣ ಕೋಣಗಳಿಗೆ ಕೊಡುತ್ತಿದ್ದ ಹಿಂಸೆ. ಇದೀಗ ಕಂಬಳ ಸಮಿತಿ ಬೆತ್ತಕ್ಕೆ ಹೊಸ ರೂಪ ಕೊಟ್ಟಿದೆ. ಬೆತ್ತದ ಮೇಲೆ ಸ್ಪಾಂಜ್‍ನ ಕವರ್ ಬಂದಿದ್ದು ಏಟು ನೋವೇ ಮಾಡುವುದಿಲ್ಲ. ಪೆಟ್ಟು ಬಿದ್ದ ಶಬ್ಧ ಬಂದರೂ ಅದು ಪೆಟ್ಟು ಅಂತ ಅನ್ನಿಸಲ್ಲ.
Advertisement
Advertisement
ಕಂಬಳ ಕ್ರೀಡೆಯನ್ನು ಈ ಹಿಂದೆ ಜಾನಪದವಾಗಿ, ಕೃಷಿ ಚಟುವಟಿಕೆಯ ಫ್ರೀ ಟೈಮಲ್ಲಿ ಆಚರಿಸಲಾಗುತ್ತಿತ್ತು. ಆದರೆ ಈಗ ಕಂಬಳಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದೆ. ಕಂಬಳವನ್ನು ಶಿಸ್ತುಬದ್ಧವಾಗಿ ಕಲಿಯಲು ಕಳೆದ 5 ವರ್ಷದಿಂದ ಉಡುಪಿ ಜಿಲ್ಲೆ ಕಾರ್ಕಳದ ಮೀಯಾರಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
Advertisement
Advertisement
ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ 155 ಅರ್ಜಿಗಳಲ್ಲಿ 27 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಿದೆ. ಯೋಗ, ಧ್ಯಾನ, ಕಂಬಳದ ಹಗ್ಗ ನೇಯುವುದು, ಬೆತ್ತ ತಯಾರಿಕೆ, ಕೋಣಗಳ ಸ್ನಾನ, ಆಹಾರ ಕೊಡುವುದು ಹೀಗೆ ಕಂಬಳದ ಎ ಟು ಝಡ್ ಟ್ರೈನಿಂಗ್ ಕೊಟ್ಟು ಕಂಬಳದ ಓಟಗಾರರನ್ನಾಗಿ ಮಾಡಲಾಗಿದೆ. ವರ್ಷಕ್ಕೆ ಐದು ತಿಂಗಳು ಕಂಬಳ ನಡೆಯುತ್ತದೆ. ಅಂತಾರಾಷ್ಟ್ರೀಯ ಕ್ರೀಡಾಪಟು ಓಡುವುದಕ್ಕಿಂತ ಹೆಚ್ಚು ವೇಗದಲ್ಲಿ ಇವರು ಓಡುತ್ತಾರೆ. ಉತ್ತಮ ಓಟಗಾರ 5 ರಿಂದ 7 ಲಕ್ಷ ರೂ. ಸಂಪಾದನೆ ಮಾಡಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv