CricketLatest

ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಟಿ-20 ಸರಣಿಯಿಂದ ಔಟ್

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮತ್ ಗಾಯದ ಸಮಸ್ಯೆಯಿಂದ ಭಾರತ ವಿರುದ್ಧದ ಟಿ-20 ಸರಣಿಯಿಂದ ಹೊರ ನಡೆದಿದ್ದಾರೆ.

ಈ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದ್ದು, ಭಾರತ ವಿರುದ್ಧ ಐದನೇ ಏಕದಿನ ಪಂದ್ಯದಲ್ಲಿ ಸ್ಮಿತ್ ಬಲ ಭುಜಕ್ಕೆ ಗಾಯವಾಗಿರುವ ಕಾರಣ ಭಾರತದ ಪ್ರವಾಸದಿಂದ ಮೊಟಕುಗೊಳಿಸಲಾಗಿದೆ ಎಂದು ವೈದ್ಯರಾದ ರಿಚರ್ಡ್ ಸಾ ತಿಳಿಸಿದ್ದಾರೆ. ನಾಯಕ ಸ್ಮಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ. ಸ್ಮಿತ್ ಸ್ಥಾನವನ್ನು ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ಪಡೆದಿದ್ದಾರೆ.

ಶುಕ್ರವಾರ ಅಭ್ಯಾಸದ ವೇಳೆ ಸ್ಮಿತ್ ಸ್ವಲ್ಪ ಸಮಯದ ಕಾಲ ಮೈದಾನದಲ್ಲಿ ಅಭ್ಯಾಸವನ್ನು ನಡೆಸಿದ್ದರು. ನಂತರ ತಂಡದ ವೈದ್ಯರ ಬಳಿ ಮಾತನಾಡಿ ವಿಶಾಂತ್ರಿಯನ್ನು ಪಡೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ ಸ್ಮಿತ್ ಅವರಿಗೆ ಗಂಭೀರ ಗಾಯವಾಗಿಲ್ಲ. ಆಸ್ಟ್ರೇಲಿಯಾ ತಂಡದ ಮುಂದಿನ ಆಶಸ್ ಸರಣಿಯಿಂದ ಅವರು ದೂರ ಉಳಿಯುವುದಿಲ್ಲ ಎಂದು ವರದಿಯಾಗಿದೆ.

ತಂಡದ ಬ್ಯಾಟಿಂಗ್ ಆರ್ಡರ್ ಉತ್ತಮವಾಗಿದ್ದು, ಗ್ಲೆನ್ ಈ ಹಿಂದೆ ತಂಡದಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಫಿಂಚಿ ಮತ್ತು ವಾರ್ನರ್ ಉತ್ತಮ ಆರಂಭವನ್ನು ನೀಡುವ ಅದ್ಭುತವಾದ ಜೋಡಿಯಾಗಿದೆ. ತಂಡವು ಯಾವುದೇ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಟಿಮ್ ಪೈನೆ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *