ವಾಷಿಂಗ್ಟನ್: ಆಪಲ್ ಕಂಪನಿಯ ಸಹ-ಸಂಸ್ಥಾಪಕ (Apple co-founder) ಸ್ಟೀವ್ ಜಾಬ್ಸ್ (Steve Jobs) ಅವರು ಧರಿಸುತ್ತಿದ್ದ ಕಂದು ಬಣ್ಣದ ಲೆದರ್ ಚಪ್ಪಲಿ 1.77 ಕೋಟಿಗೆ ($218,750) ಮಾರಾಟವಾಗಿದೆ ಎಂದು ಹರಾಜು (Auctions) ಕಂಪನಿ ಜೂಲಿಯನ್ಸ್ (Julien’s) ತಿಳಿಸಿದೆ.
ನವೆಂಬರ್ 11 ರಿಂದ ನೇರ ಪ್ರಸಾರವಾದ ಹರಾಜು ಪ್ರಕ್ರಿಯೆ ನವೆಂಬರ್ 13ಕ್ಕೆ ಮುಕ್ತಾಯವಾಯಿತು. ಒಂದು ಜೊತೆ ಕಂದು ಬಣ್ಣದ (Brown Suede) ಸ್ಯೂಡ್ ಲೆದರ್ ಬರ್ಕೆನ್‍ಸ್ಟಾಕ್ ಅರಿಜೋನಾ ಚಪ್ಪಲಿಯನ್ನು (Leather Birkenstock Arizona sandals) ಸ್ಟೀವ್ ಜಾಬ್ಸ್ ಅವರು ಧರಿಸುತ್ತಿದ್ದರು. 1970ರ ಮತ್ತು 1980ರ ದಶಕದಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಯನ್ನು ಧರಿಸುತ್ತಿದ್ದರು. ಈ ಒಂದು ಜೊತೆ ಚಪ್ಪಲಿ, ಹಿಂದೆ ಸ್ಟೀವ್ ಜಾಬ್ಸ್ ಅವರ ಮನೆ ನಿರ್ವಾಹಕ ಆಗಿದ್ದ ಮಾರ್ಕ್ ಶೆಫ್ ಅವರ ಬಳಿ ಇತ್ತು.
ಹರಾಜು ಮನೆಯ ವೆಬ್‍ಸೈಟ್‍ನಲ್ಲಿನ ವಿವರಗಳ ಪ್ರಕಾರ, ಆಪಲ್ ಕಂಪನಿಯ ಇತಿಹಾಸದಲ್ಲಿ ಅನೇಕ ಪ್ರಮುಖ ಕ್ಷಣಗಳಲ್ಲಿ ಸ್ಟೀವ್ ಜಾಬ್ಸ್ ಈ ಚಪ್ಪಲಿಗಳನ್ನು ಧರಿಸಿದ್ದರು. 1976ರಲ್ಲಿ ಲಾಸ್ ಆಲ್ಟೋಸ್ ಗ್ಯಾರೇಜ್‍ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಆನ್ ಮಾಡುವ ಸಂದರ್ಭದಲ್ಲಿ ಸ್ಟೀವ್ ಜಾಬ್ಸ್ ಇದೇ ಚಪ್ಪಲಿಯನ್ನು ಧರಿಸಿದ್ದರು. ಜಾಬ್ಸ್ ಬಿರ್ಕೆನ್‍ಸ್ಟಾಕ್ಸ್‌ನ ಜಾಣ್ಮೆ ಮತ್ತು ಪ್ರಾಯೋಗಿಕತೆಯನ್ನು ಕಂಡು ಜನ ಬೆರಗಾಗಿದ್ದರು. ಇದನ್ನೂ ಓದಿ: ಯಾರಿಗೂ ನಂಬಿಕೆ ದ್ರೋಹ ಮಾಡ್ಬೇಡಿ- ಗೆಳತಿಯ ಕತ್ತು ಸೀಳಿ ವೀಡಿಯೋ ಹಂಚಿಕೊಂಡ ಕ್ರೂರಿ
ಈ ಚಪ್ಪಲಿಯನ್ನು ಇಟಲಿಯ ಮಿಲಾನೊದಲ್ಲಿನ ಸಲೋನ್ ಡೆಲ್ ಮೊಬೈಲ್‍ನಲ್ಲಿ ಮಾತ್ರವಲ್ಲದೇ, 2017 ರಲ್ಲಿ ಜರ್ಮನಿಯ ರಹ್ಮ್ಸ್‍ನಲ್ಲಿರುವ ಬರ್ಕೆನ್‍ಸ್ಟಾಕ್ ಪ್ರಧಾನ ಕಚೇರಿಯಲ್ಲಿ, ನ್ಯೂಯಾರ್ಕ್‍ನ ಸೋಹೋದಲ್ಲಿನ ಬಿರ್ಕೆನ್‍ಸ್ಟಾಕ್‍ನಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಪ್ಸ್‍ಗಳು ಸೇರಿದಂತೆ ಹಲವೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಕೊಲ್ನ್, ಜರ್ಮನಿಯ ಕಲೋನ್‍ನಲ್ಲಿ ಪೀಠೋಪಕರಣ ಮೇಳ, 2018 ರಲ್ಲಿ ಡೈ ಝೀಟ್ ಮ್ಯಾಗಜೀನ್‍ಗಾಗಿ ಝೀಟ್ ಈವೆಂಟ್ ಬರ್ಲಿನ್ ಮತ್ತು ಇತ್ತೀಚೆಗೆ ಜರ್ಮನಿಯ ಸ್ಟಟ್‍ಗಾರ್ಟ್‍ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲೂ ಇಡಲಾಗಿತ್ತು. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?