ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಭರವಸೆ ನೀಡಿದರು.ಇದನ್ನೂ ಓದಿ: ಪ್ರಾಯೋಜಕರು ಮಕ್ಕಳಿಗೆ ಬಾತ್, ಹೋಳಿಗೆ ಕೊಟ್ಟಿದ್ದರು, ಇದಕ್ಕೆ ಕ್ರಮ ಆಗಬೇಕು – ನರೇಂದ್ರಸ್ವಾಮಿ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 37 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಕೆಲಸ ನಡೆಯುತ್ತಿವೆ. ಕಾಮಗಾರಿ ವಿಳಂಬ ಆಗಲು ಕೇಂದ್ರ-ರಾಜ್ಯ ಎರಡು ಕಾರಣ. ಭೂಸ್ವಾಧೀನ, ಕೊರೊನಾ ಸೇರಿ ಅನೇಕ ಸಮಸ್ಯೆಯಿಂದ ವಿಳಂಬವಾಗಿದೆ. ನಾನು ಬಂದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಜೊತೆ 10 ಸಭೆ ಮಾಡಿದ್ದೇನೆ. ಮುಂದಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಗೆ ಶಾಸಕರನ್ನು ಆಹ್ವಾನ ಮಾಡ್ತೀವಿ. ಶಾಸಕರೇ ತಮ್ಮ ಸಮಸ್ಯೆ ಹೇಳಲಿ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭ ಮಾಡಲು ರಾಷ್ಟ್ರೀಯ ಪ್ರಾಧಿಕಾರಕ್ಕೆ ಮನವಿ ಮಾಡ್ತೀವಿ ಎಂದರು.
ಇದಕ್ಕೂ ಮುನ್ನ ಮಾತನಾಡಿದ್ದ ಕಾಂಗ್ರೆಸ್ ಸದಸ್ಯ ರವಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳು ವಿಳಂಬ ಆಗುತ್ತಿವೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಈಗ ಆಗುತ್ತಿರುವ ಕಾಮಗಾರಿಯಲ್ಲಿಯೂ ಲೋಪ ಆಗ್ತಿದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಲೋಪ ಇದೆ. ಅದನ್ನು ಸರಿ ಮಾಡಬೇಕು. ಟೋಲ್ ಸಂಗ್ರಹ ಮಾಡುವ ಸಿಬ್ಬಂದಿಯ ವರ್ತನೆ ಸರಿಯಿಲ್ಲ. ಬೆಂಗಳೂರು-ಮೈಸೂರು ಹೈವೇ ಸಿಬ್ಬಂದಿ ವರ್ತನೆ ಸರಿಯಿಲ್ಲ. ಮಳೆ ಬಂದರೆ ಬೆಂಗಳೂರು-ಮೈಸೂರು ಹೈವೇ ಮುಚ್ಚಿ ಹೋಗುತ್ತದೆ. ಅದನ್ನು ಸರಿ ಮಾಡಬೇಕು. ಟ್ರಾಮಾ ಸೆಂಟರ್ ಅನ್ನು ಪ್ರಾರಂಭ ಮಾಡಬೇಕು ಎಂದು ಒತ್ತಾಯ ಮಾಡಿದರು.ಇದನ್ನೂ ಓದಿ: ಬಾಗಲಕೋಟೆ | ತಂದೆಯಂತೆ ಮಗಳು – ನೌಕಾಸೇನೆಗೆ ಸೇರ್ಪಡೆ