ಬೆಂಗಳೂರು: ಕೊಡಗು ಪುನರ್ ನಿರ್ಮಾಣದ ಜವಾಬ್ದಾರಿ ಸರ್ಕಾರ ಮೇಲಿದ್ದು, ಈ ಕುರಿತ ನೀಲಿ ನಕ್ಷೆ ಸಿದ್ಧವಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳೆಯಿಂದಾಗಿ ಕೊಡಗು, ದಕ್ಷಿಣ ಕನ್ನಡದಲ್ಲಿ ಭಾರೀ ಅನಾಹುತವಾಗಿದೆ. ಕೊಡಗು ಅನಾಹುತ ಸರಿಪಡಿಸಲು, ಪುನರ್ ನಿರ್ಮಾಣ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈಗಾಗಲೇ ಪುನರ್ ನಿರ್ಮಾಣದ ನೀಲಿ ನಕ್ಷೆ ಸಿದ್ಧವಾಗಿದ್ದು, ವರದಿ ಕೂಡಾ ಸಿದ್ಧವಾಗಿದೆ. ಈ ಕುರಿತು ಸಿಎಂ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜೋಡುಪಾಲ ದುರಂತಕ್ಕೂ ಮುನ್ನ ಮೂಕ ಪ್ರಾಣಿಗಳಿಂದ ಸಿಕ್ಕಿತ್ತು ಮುನ್ಸೂಚನೆ!
Advertisement
Advertisement
ಕೊಡಗಿನ ಜಿಲ್ಲಾಧಿಕಾರಿಗಳ ವರದಿ ಅನ್ವಯ 758 ಕುಟುಂಬಗಳು ನಿರ್ಗತಿಕರಾಗಿವೆ. ಇವರಿಗೆ ಮನೆ ಕಟ್ಟಿ ಕೊಡಿಸುವ ಜವಾಬ್ದಾರಿ ವಸತಿ ಇಲಾಖೆ ಕರ್ತವ್ಯವಾಗಿದೆ. ಈಗಾಗಲೇ ಮನೆ ನಿರ್ಮಾಣಕ್ಕೆ 42 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇದರಲ್ಲಿ 24 ಎಕರೆ ಜಾಗಕ್ಕೆ ಸರ್ವೆ ನಂಬರ್ ಹಾಕಲಾಗಿದೆ. ಮಾದರಿ ಮನೆ ನಿರ್ಮಾಣ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಮನೆ ಕಳೆದುಕೊಂಡ ಎಲ್ಲರಿಗೂ ಒಂದೇ ಮಾದರಿಯ ಮನೆ ನಿರ್ಮಿಸಿ ಕೊಡಲಾಗುತ್ತದೆ. ಮನೆ ನಿರ್ಮಾಣಕ್ಕೆ 6 ರಿಂದ 7 ತಿಂಗಳ ಸಮಯದ ಅವಕಾಶ ಬೇಕಾಗುತ್ತದೆ. ಎರಡು ಮೂರು ಮನೆ ಮಾದರಿಗಳು ರೆಡಿ ಇದ್ದು ಸಿಎಂ ಜೊತೆ ನಿರ್ಧಾರ ಮಾಡಿ ಯಾವ ಮನೆ ಮಾದರಿ ಎನ್ನುವುದನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.
Advertisement
ಮನೆ ನಿರ್ಮಾಣ ಮಾಡಲು ಸ್ಥಳಾವಕಾಶ ಇರುವ ಜನರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ಹಣ ಸಹಾಯ ಮಾಡುತ್ತದೆ. ಹಾನಿಯಾದ ಮನೆ ಸರಿಪಡಿಸಲೂ ಕೂಡ ಸರ್ಕಾರ ಹಣ ಸಹಾಯ ಮಾಡುತ್ತದೆ. ಈ ಎಲ್ಲಾ ಅಂಶಗಳ ವರದಿ ಸಿದ್ಧವಿದ್ದು ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುವುದಾಗಿ ವಿವರಿಸಿದರು. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!
Advertisement
ಸಿಎಂ ಜೊತೆ ಚರ್ಚಿಸಿ ಅಗತ್ಯ ಬಿದ್ದರೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುತ್ತೇವೆ. ಎಲ್ಲರೂ ಸಂತೋಷದಿಂದ ಇರುವಂತಹ ಮಾದರಿ ಮನೆ ನಿರ್ಮಾಣ ಮಾಡುತ್ತೆವೆ ಎಂದು ಆಶ್ವಾಸನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv