ದುಡ್ಡಿಗಾಗಿ ಗೊತ್ತಿಲ್ಲದ ಜಗತ್ತಿಗೆ ಕಾಲಿಟ್ಟೆ: ಪೋರ್ನ್ ಸ್ಟಾರ್ ಲಾನಾ ಅಳಲು

Public TV
1 Min Read
Lana Rhoades 1

ಪೋರ್ನ್ ಜಗತ್ತು ಏನು ಅಂತ ಗೊತ್ತಿರಲಿಲ್ಲ. ಬಡತನ. ನೂರು ಡಾಲರ್ ಅಂದರೆ, ನನ್ನ ಪಾಲಿಗೆ ಲಕ್ಷಾಂತರ ರೂಪಾಯಿ ಇದ್ದ ಅನುಭವ. ಆದರೆ, 1200 ಡಾಲರ್ ಗಳಿಸಬಹುದು ಎಂದು ವ್ಯಕ್ತಿಯೊಬ್ಬ ಹೇಳಿದಾಗ, ಆ ಹಣದ ಆಸೆಗಾಗಿ ನಾನು ಚಿಕ್ಕ ವಯಸ್ಸಿನಲ್ಲೇ ಪೋರ್ನ್ ಜಗತ್ತಿಗೆ ಕಾಲಿಡಬೇಕಾಯಿತು ಎಂದಿದ್ದಾರೆ ಮಾಜಿ ನೀಲಿ ತಾರೆ ಲಾನಾ ರೋಡ್ಸ್.

Lana Rhoades 3

ಲಾನಾ ರೋಡ್ಸ್ (Lana Rhoades) ನೀಲಿ ಚಿತ್ರ ಜಗತ್ತಿಗೆ ಕಾಲಿಟ್ಟಾಗ ಅವರಿಗೆ ಕೇವಲ 17ರ ವಯಸ್ಸು. ಅದು ಏನೂ ಗೊತ್ತಿಲ್ಲದ ವಯಸ್ಸು. ತಾನು ಎಲ್ಲಿಗೆ ಹೋಗುತ್ತಿದ್ದೇನೆ, ಅವರು ತನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಅಂದಾಜು ಹಾಕದ ವಯಸ್ಸು. ಈ ವೇಳೆಯಲ್ಲೇ ಅವರು ಪೋರ್ನ್ ಜಗತ್ತಿಗೆ ಕಾಲಿಟ್ಟು, ನರಕ ಅನುಭವಿಸಿದೆ ಎಂದು ಸಂದರ್ಶನದಲ್ಲಿ (interview) ಹೇಳಿಕೊಂಡಿದ್ದಾರೆ.

Lana Rhoades 2

ನನಗಿನ್ನೂ 17ರ ವಯಸ್ಸು. 40ಕ್ಕೂ ಹೆಚ್ಚು ವಯಸ್ಸಾದವರ ಜೊತೆ ಮಲಗಬೇಕಿತ್ತು. ಏನೋ ಒಂದು ತರಹ ಹಿಂಸೆ. ಏಳೆಂಟು ತಿಂಗಳಲ್ಲಿ ನಾನು ಪಡಬಾರದು ಕಷ್ಟ ಪಟ್ಟೆ. ನನ್ನ ಜೊತೆ ಮಲಗಿದವರ ವಿಡಿಯೋ ಮಾಡಲಾಯಿತು. ಆ ವಿಡಿಯೋಗಳು (video) ಟಾಪ್ ನಲ್ಲಿದ್ದವು. ನಾನು ನನ್ನದಲ್ಲದ ಜಗತ್ತಿಗೆ ಕಾಲಿಟ್ಟಿದ್ದೇನೆ ಅನಿಸೋಕೆ ಶುರುವಾಯಿತು. ಅಲ್ಲಿಂದ ವಾಪಸ್ಸು ಬಂದಬಿಟ್ಟೆ. ನನ್ನ ವಿಡಿಯೋಗಳನ್ನು ಡಿಲಿಟ್ ಮಾಡಿ ಎಂದು ಕೇಳಿಕೊಂಡೆ. ಆದರೆ, ಅವು ಡಿಲಿಟ್ ಆಗಿಲ್ಲ ಎಂದು ಹೇಳುತ್ತಾರೆ ಲಾನಾ.

 

ಕೆಲವರು ಇಷ್ಟಪಟ್ಟೇ ಈ ಜಗತ್ತಿಗೆ ಕಾಲಿಡುತ್ತಾರೆ. ಇನ್ನೂ ಕೆಲವರು ಏನೂ ಗೊತ್ತಿಲ್ಲದೇ ಬಂದು, ವಾಪಸ್ಸು ಹೋಗಲು ಒದ್ದಾಡುತ್ತಾರೆ. ವಾಪಸ್ಸು ಬಂದವರು ಸಮಾಜದ ಮುಂದೆ ಹೇಗೆ ನಿಲ್ಲಬೇಕು ಎಂದು ಪರಿತಪಿಸುತ್ತಾರೆ. ನನ್ನದು ಈಗ ಅದೇ ಆಗಿದೆ. ನನ್ನ ವಿಡಿಯೋಗಳನ್ನು ನಾನು ನೋಡಿದಾಗ ಹಿಂಸೆ ಆಗುತ್ತದೆ ಎಂದಿದ್ದಾರೆ ಲಾನಾ.

Share This Article