ಭುವನೇಶ್ವರ್: ಕುಡಿದ ಅಮಲಿನಲ್ಲಿ ವ್ಯಕ್ತಿಯ ಗುದದ್ವಾರಕ್ಕೆ ಸ್ಟೀಲ್ ಗ್ಲಾಸ್ ಅನ್ನು ಆತನ ಸ್ನೇಹಿತರೇ ತುರುಕಿರುವ ಘಟನೆ ಒಡಿಶಾದ ಬೆಹ್ರಾಂಪುರದಲ್ಲಿ ನಡೆದಿದೆ.
ಭಾನುವಾರ ಬೆಹಾರ್ಂಪುರ ನಗರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರು ವ್ಯಕ್ತಿಯ ಕರುಳಿನಿಂದ ಸ್ಟೀಲ್ ಗ್ಲಾಸ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಹಾಕಿದ್ದಾರೆ. ಇದನ್ನೂ ಓದಿ: ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ
ಗುಜರಾತ್‍ನ ಸೂರತ್‍ನಲ್ಲಿ ಕೆಲಸ ಮಾಡುತ್ತಿರುವ 45 ವರ್ಷದ ಕೃಷ್ಣ ರೌತ್, 10 ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅವನ ಸ್ನೇಹಿತರು ಕುಡಿದ ಅಮಲಿನಲ್ಲಿ ಗುದದ್ವಾರದೊಳಗೆ ಸ್ಟೀಲ್ ಗ್ಲಾಸ್ ಅನ್ನು ತುರುಕಿದ್ದಾರೆ. ಮರುದಿನದಿಂದ ಕೃಷ್ಣ ರೌತ್ ಕರುಳಿನಲ್ಲಿ ನೋವಿ ಕಾಣಿಸಿಕೊಂಡು ಬಳಲುತ್ತಿದ್ದರೂ, ಈ ವಿಚಾರವನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಹೇಳಿಕೊಂಡಿರಲಿಲ್ಲ. ಆದರೆ ನೋವು ತೀವ್ರವಾಗುತ್ತಿದ್ದಂತೆ ಸೂರತ್ ತೊರೆದು ಗಂಜಾಂನ ತಮ್ಮ ಹಳ್ಳಿಗೆ ತೆರಳಿದ್ದಾರೆ.
ಕೃಷ್ಣ ರೌತ್ ಗ್ರಾಮಕ್ಕೆ ತಲುಪುತ್ತಿದ್ದಂತೆ, ಅವರ ಹೊಟ್ಟೆಯಲ್ಲಿ ಊತ ಹೆಚ್ಚಾಗಿದೆ ಮತ್ತು ಮಲವಿಸರ್ಜನೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರ ಕುಟುಂಬಸ್ಥರ ಸಲಹೆಯ ಮೇರೆಗೆ, ತಪಾಸಣೆಗಾಗಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದರು. ಇದನ್ನೂ ಓದಿ: ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ, ಶಕ್ತಿ ಪ್ರದರ್ಶನ ಸರಿಯಲ್ಲ: ವಿಶ್ವನಾಥ್
ಎಕ್ಸ್-ರೇ ನಡೆಸಿದ ವೈದ್ಯರಿಗೆ ಕರುಳಿನೊಳಗೆ ಕ್ಲಾಸ್ ಸೇರಿಕೊಂಡಿರುವುದು ತಿಳಿದುಬಂದಿದೆ. ನಂತರ ವೈದ್ಯರು ಮೊದಲು ಗುದನಾಳದ ಮೂಲಕ ಗ್ಲಾಸ್ ಅನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ತಮ್ಮ ಪ್ರಯತ್ನ ವಿಫಲವಾದಾಗ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ.ಚರಣ್ ಪಾಂಡಾ ಅವರ ಸಲಹೆ ಮೇರೆಗೆ ಸಹಾಯಕ ಪ್ರಾಧ್ಯಾಪಕ ಸಂಜಿತ್ ಕುಮಾರ್ ನಾಯಕ್, ಡಾ.ಸುಬ್ರತ್ ಬರಲ್, ಡಾ.ಸತ್ಯಸ್ವರೂಪ್, ಡಾ.ಪ್ರತಿಭಾ ಅವರನ್ನೊಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಗ್ಲಾಸ್ ಹೊರತೆಗೆದಿದ್ದಾರೆ. ಇದೀಗ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.