ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯು (Indian Navy) ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ (F35) ಹಾಗೂ ಹಿಮಗಿರಿ (F34) (Udaygiri (F35) and Himagiri (F34) ನೌಕೆಗಳು ಸೇನೆಗ ಸೇರಲು ಸಜ್ಜಾಗಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಆಗಸ್ಟ್ 26ರಂದು ಈ ಎರಡೂ ಸ್ವದೇಶಿ ನಿರ್ಮಿತ ನೌಕೆಗಳನ್ನು ಏಕಕಾಲಕ್ಕೆ ಸೇನೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಪೂರ್ವ ನೌಕಾ ಕಮಾಂಡ್ (ENC) ತಿಳಿಸಿದ್ದಾರೆ.
Indian Navy is set to commission the frontline stealth frigates, Udaygiri and Himgiri.#IndianNavy is preparing for the simultaneous commissioning of two advanced frontline frigates – Udaygiri (F35) & Himgiri (F34) on 26 Aug 25.
This will be the first time that two major… pic.twitter.com/g6sb9HsELc
— All India Radio News (@airnewsalerts) August 10, 2025
ಇದೇ ಮೊದಲ ಬಾರಿಗೆ ಎರಡು ಪ್ರತ್ಯೇಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಯುದ್ಧನೌಕೆಗಳನ್ನು (War Ships) ವಿಶಾಖಪಟ್ಟಣದಲ್ಲಿ ಏಕಕಾಲಕ್ಕೆ ನೌಕಾಪಡೆಗೆ ಸೇರಿಸಲಾಗುತ್ತಿದೆ. ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ
ಅಧಿಕಾರಿಗಳ ಪ್ರಕಾರ, ಸುಮಾರು 6,700 ಟನ್‌ಗಳಷ್ಟು ತೂಕ ಇರುವ P17A ವರ್ಗದ ಯುದ್ಧನೌಕೆಗಳು, ಹಿಂದಿನ ಶಿವಾಲಿಕ್-ವರ್ಗದ ಯುದ್ಧನೌಕೆಗಳಿಗಿಂತ ಶೇ.5 ಪಟ್ಟು ದೊಡ್ಡದಾಗಿದೆ. F35 ಎಂಬ ಉದಯಗಿರಿ ನೌಕೆಯು ಪ್ರಾಜೆಕ್ಟ್ 17A ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದ ಯುದ್ಧನೌಕೆಯಿಂದ ಬಂದ 2ನೇ ರಚೆನೆಯಾಗಿದೆ. ಇದನ್ನು ಮುಂಬೈನ ಮಡಗಾಂವ್ ಡಾಕ್ ಹಡಗು ನಿರ್ಮಾಣ ಸಂಸ್ಥೆ (MDL) ಅಭಿವದ್ಧಿಪಡಿಸಿದೆ. ಇನ್ನೂ ಹಿಮಗಿರಿ ಯುದ್ಧನೌಕೆಯನ್ನು ಕೋಲ್ಕತ್ತದಲ್ಲಿರುವ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜಿನಿಯರ್ಸ್ ಸಂಸ್ಥೆ (GRSE) ನಿರ್ಮಿಸಿದೆ. ಈ ಪಿ17ಎ ಯೋಜನೆಯು ಇದರ ಮೊದಲ ಪ್ರಯತ್ನವಾಗಿದೆ.
ಉದಯಗಿರಿ, ಹಿಮಗಿರಿಯ ವಿಶೇಷತೆ ಏನು?
6,700 ಟನ್ ತೂಕವಿರುವ ಈ ನೌಕೆಗಳು ಶಿವಾಲಿಗ್ ಯುದ್ಧ ನೌಕೆಗಿಂತ ಶೇ.5 ದೊಡ್ಡದಿದೆ. ರೆಡಾರ್ ಕಣ್ತಪ್ಪಿಸಿ ಶತ್ರುಗಳಿಂದ ರಕ್ಷಿಸಿಕೊಂಡು ದಾಳಿಯನ್ನು ನಡೆಸುವ ಸಾಮರ್ಥ್ಯವನ್ನೂ ಇವು ಹೊಂದಿವೆ. ಡೀಸೆಲ್ ಅಥವಾ ಅನಿಲ (CODOG) ಎರಡನ್ನೂ ಬಳಸುವ ಪ್ರೊಪೆಲರ್‌ಗಳನ್ನು ಹೊಂದಿವೆ. ಇದನ್ನೂ ಓದಿ: ಆ.15 ರಿಂದ ಸಿಗುತ್ತೆ ಫಾಸ್ಟ್ಯಾಗ್ ವಾರ್ಷಿಕ ಪಾಸ್
ಸೂಪರ್‌ಸಾನಿಕ್ ಖಂಡಾಂತರ ಕ್ಷಿಪಣಿ, ಮಧ್ಯಮ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ, 76 ಮಿ.ಮೀ. ಎಂಆರ್ ಬಂದೂಕು ಹಾಗೂ 30 ಮಿ.ಮೀ. ಹಾಗೂ 12.7 ಮಿ.ಮೀ. ಬಂದೂಕುಗಳನ್ನೂ ಅಳವಡಿಸಲಾಗಿದೆ. ಜೊತೆಗೆ ಜಲಾಂತರ್ಗಾಮಿ ನಿರೋಧಕ ಹಾಗೂ ನೀರಿನೊಳಗೆ ಬಳಸುವ ಯಾವುದೇ ಶಸ್ತ್ರಾಸ್ತ್ರಗಳಿಂದ ರಕ್ಷಿಸಿಕೊಳ್ಳಬಲ್ಲ ಶಕ್ತಿಶಾಲಿ ನೌಕೆ ಇದಾಗಿದೆ.
ಕಡಲಿನಲ್ಲಿ ಈಗಾಗಲೇ ಕಠಿಣ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಯಂತ್ರೋಪಕರಣಗಳು, ಅಗ್ನಿಶಾಮಕ ವ್ಯವಸ್ಥೆ, ಹಾನಿ ನಿಯಂತ್ರಣ, ನೌಕಾ ನಿರ್ವಹಣೆ ಮತ್ತು ಸಂಪರ್ಕ ವ್ಯವಸ್ಥೆಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆದಿದೆ ಎಂದು ನೌಕಾದಳ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದಲ್ಲದೇ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಸಂಸ್ಥೆಯಿಂದ ಅಭಿವೃದ್ಧಿಯಾದ 100ನೇ ಹಡಗು ಉದಯಗಿರಿ ಎಂಬುದು ಮತ್ತೊಂದು ವಿಶೇಷ. ಇದನ್ನೂ ಓದಿ: ನೋಯ್ಡಾದ ಡೇಕೇರ್‌ನಲ್ಲಿ 15 ತಿಂಗಳ ಹೆಣ್ಣುಮಗು ಮೇಲೆ ಹಲ್ಲೆ – ತೊಡೆ ಮೇಲೆ ಕಚ್ಚಿ ವಿಕೃತಿ