ವಾಷಿಂಗ್ಟನ್: ಭಾರತೀಯ-ಅಮೆರಿಕನ್ (Indian-American) ಕುಟುಂಬದ ಒಡೆತನದ ಜ್ಯುವೆಲರ್ಸ್ನಲ್ಲಿ (Jewellery Robbery) ಮುಸುಕುಧಾರಿ ದರೋಡೆಕೋರರ ಗುಂಪೊಂದು 16 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ.
ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಯಲ್ಲಿ, ದರೋಡೆಕೋರರು ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಅಂಗಡಿಗೆ ನುಗ್ಗಿ ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಳೆದ ವರ್ಷ ಜೂನ್ 18 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದರೋಡೆಯ ಸಮಯದಲ್ಲಿ ಅಂಗಡಿಯು ತನ್ನ ಸ್ಟಾಕ್ನ ಸುಮಾರು 75 ರಿಂದ 80% ನಷ್ಟು ಕಳೆದುಕೊಂಡಿದೆ. ಪೊಲೀಸರ ಬೆನ್ನಟ್ಟಿದ ನಂತರ ನಾಲ್ವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದರೂ, ಗುಂಪಿನ ಬಹುಪಾಲು ದರೋಡೆಕೋರರು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಅಮೆರಿಕ ಭಾರತದ ಜೊತೆ ಬೇಡಿಕೊಂಡಿದೆ: ಇರಾನ್
ಗುಂಪುಗೂಡಿ ಜ್ಯುವೆಲರ್ಸ್ ಅಂಗಡಿಗೆ ನುಗ್ಗಿದ ದರೋಡೆಕೋರರು ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರು ಕದ್ದ ಕಾರುಗಳನ್ನೇ ಬಳಸಿ ಎಸ್ಕೇಪ್ ಆಗಿದ್ದಾರೆ.
ಅಪರಾಧಕ್ಕೆ ಸಂಬಂಧಿಸಿದಂತೆ ಪೊಲೀಸರು, 19 ರಿಂದ 20 ವರ್ಷ ವಯಸ್ಸಿನ ಅಫತುಪೆಟೈಕಿ ಫಾಸಿಸಿಲಾ, ಜೋಸ್ ಹೆರಾಡಾ-ಅರಾಗೊನ್, ಆಂಡ್ರೆಸ್ ಪ್ಯಾಲೆಸ್ಟಿನೊ ಮತ್ತು ಟಾಮ್ ಪಾರ್ಕರ್ ಡೊನೆಗನ್ ದರೋಡೆಕೋರರನ್ನು ಬಂಧಿಸಿದ್ದಾರೆ. ಫಾಸಿಸಿಲಾ ಮತ್ತು ಪ್ಯಾಲೆಸ್ಟಿನೊ ಅವರನ್ನು ನಂತರ ಬಿಡುಗಡೆ ಮಾಡಲಾಗಿದ್ದರೂ, ಶಂಕಿತರನ್ನು ಬಂಧಿಸಲಾಗಿಲ್ಲ. ಇದನ್ನೂ ಓದಿ: ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಭೀಕರ ದಾಳಿ – ಇರಾನಿನ ಕಿರೀಟ ಖಾರ್ಗ್ ದ್ವೀಪಕ್ಕೆ ಬಾಂಬ್

