ಹೈದರಾಬಾದ್: ಭಾರತ ಕ್ರೀಡಾತಾರೆಯರಾದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸಾನಿಯಾ ಮಿರ್ಜಾ ಸೇರಿದಂತೆ ಹಲವು ಕ್ರೀಡಾಪಟುಗಳು ವಿಶಾಖಪಟ್ಟಣಂ ಅನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳು ಹಾಗೂ ಜನರಿಗೆ ಸಂತಾಪ ಸೂಚಿಸಿ ಧೈರ್ಯ ತುಂಬಿದ್ದಾರೆ.
ಗುರುವಾರ ಬೆಳಗಿನ ಜಾವ ವಿಶಾಖಪಟ್ಟಣಂದಲ್ಲಿ ಘಟನೆ ನಡೆದಿದ್ದು, ಸುಮಾರು 30 ವರ್ಷಗಳ ಹಿಂದೆ ಭೋಪಾಲ್‍ನಲ್ಲಿ ನಡೆದಿದ್ದ ಅನಿಲ ಸೋರಿಕೆ ದುರಂತವನ್ನು ನೆನಪಿಸಿದೆ. ಈವರೆಗೂ ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 30 ಮಂದಿ ಸ್ಥಿತಿ ಗಂಭೀರವಾಗಿದೆ. ಅಲ್ಲದೇ 3 ಸಾವಿರಕ್ಕೂ ಹೆಚ್ಚು ಮಂದಿ ದುರಂತದಿಂದ ಸಮಸ್ಯೆ ಎದುರುಸಿದ್ದಾರೆ. ಸಮಯ ಕಳೆದಂತೆ ದುರಂತದಲ್ಲಿ ಮೃತರದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
My condolences to the families who lost their loved ones in the #VizagGasLeak. Praying for everyone affected and recovering in the hospital. ????????
— Virat Kohli (@imVkohli) May 7, 2020
Advertisement
‘ವಿಶಾಖಪಟ್ಟಣಂ ಗ್ಯಾಸ್ ಲೀಕ್‍ನಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಳಿಗೆ ನನ್ನ ಸಂತಾಪ. ಘಟನೆಯಿಂದ ಬಾಧಿತರಾಗಿರುವ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುತ್ತೇನೆ’ ಎಂದು ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Really unfortunate news of the #VizagGasLeak claiming lives and affecting many others. My deepest condolences to the family members of those deceased and praying for the quick recovery of those affected. Stay strong and safe Vizag
— yuvraj singh (@YUVSTRONG12) May 7, 2020
Advertisement
ವಿಶಾಖಪಟ್ಟಣ ಗ್ಯಾಸ್ ಲೀಕ್ ಘಟನೆ ನಿಜವಾಗಿಯೂ ದುರದೃಷ್ಟಕರ. ಹಲವು ಜೀವಗಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಮೃತರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಚಿಕಿತ್ಸೆ ಪಡೆಯುತ್ತಿರುವವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ವೈಜಾಗ್ ಅನಿಲ ಸೋರಿಕೆ ಘಟನೆ ದುರದೃಷ್ಟಕರ. ವಿಶೇಷವಾಗಿ ಘಟನೆಯಲ್ಲಿ ಸಾವಿಗೀಡಾಗಿರುವ ಕುಟುಂಬಗಳು ಹಾಗೂ ಜನರ ಒಳಿಗಾಗಿ ಪ್ರಾರ್ಥನೆ ಮಾಡುವುದಾಗಿ ಸಾನಿಯಾ ಮಿರ್ಜಾ ಹೇಳಿದ್ದಾರೆ.
What an unfortunate incident with the gas leak in Vizag ???? prayers and thoughts are with everyone there and specially ppl and families affected .. stay strong Vizag .. #prayforvizag
— Sania Mirza (@MirzaSania) May 7, 2020