ಬೆಂಗಳೂರು: ಹಾಡಹಗಲೇ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಹಾಡ ಹಗಲೇ ಮಾಜಿ ಸಹೋದ್ಯೋಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ವೃತ್ತಿ ವೈಷಮ್ಯವೇ ಈ ಕೊಲೆಗೆ ಕಾರಣ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ಬೆಂಗಳೂರಿನ (Bengaluru) ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಜೋಕರ್ ಫಿಲಿಕ್ಸ್ (Joker Felix) ತನ್ನಿಬ್ಬರು ಸಹಚರರೊಂದಿಗೆ ಸೇರಿ ಏರೋನಾಟಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್‌ನನ್ನು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದ.
- Advertisement3
ಇದೀಗ ಕೊಲೆಗೆ ವೃತ್ತಿ ವೈಷಮ್ಯವೇ ಕಾರಣ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಇಂಟರ್‌ನೆಟ್ ಪೂರೈಸುವ ಖಾಸಗಿ ಬ್ರಾಡ್ ಬ್ರ್ಯಾಂಡ್ ಕಂಪನಿಯಲ್ಲಿ ಫಣೀಂದ್ರ ಹಾಗೂ ವಿನುಕುಮಾರ್ ಕೆಲಸ ಮಾಡುತ್ತಿದ್ದರು. ಬಳಿಕ ಆ ಕಂಪನಿ ತೊರೆದು 2022ರ ನವೆಂಬರ್‌ನಲ್ಲಿ ಏರೋನಿಕ್ಸ್ ಮೀಡಿಯಾ ಪ್ರೈ.ಲಿ. ಹೆಸರಿನಲ್ಲಿ ಪಾಲುದಾರಿಕೆಯಲ್ಲಿ ಸ್ವಂತ ಬ್ರಾಡ್ ಬ್ಯಾಂಡ್ ಕಂಪನಿಯನ್ನು ತೆರೆದರು. ಈ ಕಂನಿಯಲ್ಲಿ 10 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
- Advertisement
ಕೇವಲ 7-8 ತಿಂಗಳಲ್ಲಿ ಫಣೀಂದ್ರ ಕಂಪನಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಕಂಡಿತು. ಈ ಹಿಂದೆ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ಫಣೀಂದ್ರನ ಕಂಪನಿ ತೀವ್ರ ಪೈಪೋಟಿ ನೀಡಲಾರಂಭಿಸಿತು. ಇದರಿಂದ ಆ ಕಂಪನಿಗೆ ನಷ್ಟ ಉಂಟಾಗಿ ಎರಡು ಕಂಪನಿಗಳ ನಡುವೆ ವೃತ್ತಿ ವೈಷಮ್ಯ ಮೂಡಿತ್ತು ಎನ್ನಲಾಗಿದೆ.
ಬನ್ನೇರುಘಟ್ಟ ರಸ್ತೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಫಣೀಂದ್ರ ಅವರಿಗೆ ಆರೋಪಿ ಫಿಲಿಕ್ಸ್ ಸಹೋದ್ಯೋಗಿಯಾಗಿದ್ದ. ಈತನ ವರ್ತನೆ ಸರಿ ಇಲ್ಲದ್ದಕ್ಕೆ ಫಣೀಂದ್ರ ಅವರು ಆತನನ್ನು ಕೆಲಸದಿಂದ ತೆಗೆದಿದ್ದರು.
ಡಬಲ್ ಮರ್ಡರ್ ಮಾಡಿದ್ದು ಹೇಗೆ?
ಆರೋಪಿ ಫಿಲಿಕ್ಸ್ ಹಾಗೂ ಆತನ ಇಬ್ಬರು ಸಹಚರರು ಮಂಗಳವಾರ ಅಮೃತಹಳ್ಳಿಯ ಏರೊನಿಕ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್‌ಗೆ ಹೋಗಿದ್ದರು. ಕಂಪನಿಯ ಎಂಡಿ ಫಣೀಂದ್ರ ಜೊತೆ ಹಳೆ ಪರಿಚಯದ ಹಿನ್ನೆಲೆ ಅರ್ಧ ಗಂಟೆ ಮಾತಾಡಿದ್ದ. ಆ ಬಳಿಕ ಲಾಂಗ್‌ನಿಂದ ಫಣೀಂದ್ರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಇದನ್ನು ತಡೆಯಲು ಬಂದ ವಿನುಕುಮಾರ್ ಮೇಲೂ ಸಹ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಏರೊನಿಕ್ಸ್ ಕಂಪನಿಯ ಸಿಬ್ಬಂದಿ ಇದನ್ನು ತಡೆಯುವ ಪ್ರಯತ್ನ ಮಾಡಿದ್ರೂ ಹೆದರಿಸಿ ಕೃತ್ಯವೆಸಗಿದ್ದಾರೆ. ಇವರನ್ನು ಹಿಡಿಯಬೇಕು ಎಂದು ಕಚೇರಿಯ ಬಾಗಿಲು ಹಾಕುವ ಯತ್ನ ಮಾಡಿದಾಗ ಹಿಂದಿನ ಬಾಗಿಲಿನಿಂದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿನಿಗೆ ಥಳಿತ – ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಜೋಕರ್ ಫಿಲಿಕ್ಸ್ ಯಾರು?
ಭೀಕರ ಡಬಲ್ ಮರ್ಡರ್ ಮಾಡಿದಾತ ಜೋಕರ್ ಫೆಲಿಕ್ಸ್ ಟಿಕ್ ಟಾಕ್ ಸ್ಟಾರ್. ಅಲ್ಲದೆ ರ‍್ಯಾಪರ್ ಕೂಡ. ಚಿತ್ರ ವಿಚಿತ್ರ ವೀಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದ. ನಟ ಉಪೇಂದ್ರ ಜೊತೆ ಪೋಸ್ ಕೊಟ್ಟು ಪ್ರಜಾಕೀಯದ ಬಗ್ಗೆ ಮಾತಾಡಿದ್ದ. ಇದಲ್ಲದೆ ಸ್ಮಶಾನದಲ್ಲಿ ಹುಡುಗಿಗೆ ತಾಳಿ ಕಟ್ಟಿ ಸಖತ್ ಫೇಮಸ್ ಆಗಿದ್ದ. ಈತನ ಚಿತ್ರ ವಿಚಿತ್ರ ಮೇಕಿಂಗ್ ಫೋಟೊ ವೀಡಿಯೊಗಳು ಈತನಿಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಜ್ ಕ್ರಿಯೇಟ್ ಮಾಡಿತ್ತು.
ಕೊಲೆ ಬಳಿಕ ಇನ್ಸ್ಟಾಗ್ರಾಮ್ ಸ್ಟೇಟಸ್:
ಜೋಕರ್ ಫಿಲಿಕ್ಸ್‌ನನ್ನು ಹುಡುಕೋಕೆ ಪೊಲೀಸರು ಎಲ್ಲಾ ಕಡೆ ತಲಾಶ್ ನಡೆಸುತ್ತಿದ್ದರೆ ಈತ ಮಾತ್ರ ಕೂಲ್ ಆಗಿ ಮತ್ತೆ ಇನ್ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಾಕಿದ್ದ. ಪಬ್ಲಿಕ್ ಟಿವಿಯ ವೆಬ್ ನ್ಯೂಸ್‌ನಲ್ಲಿ ಪ್ರಕಟವಾದ ಬೆಂಗಳೂರಿನಲ್ಲಿ ಹಾಡ ಹಗಲೇ ಡಬಲ್ ಮರ್ಡರ್ ಎನ್ನುವ ಸ್ಕ್ರೀನ್ ಶಾಟ್ ಅನ್ನು ಸ್ಟೇಟಸ್ ಹಾಕಿದ್ದ. ಕೊಲೆ ನಡೆಸಿದ ಬಳಿಕ ಏನೇನಾಗುತ್ತಿದೆ ಎನ್ನುವ ಎಲ್ಲಾ ಬೆಳವಣಿಗೆಗಳನ್ನು ಫಿಲಿಕ್ಸ್ ಗಮನಿಸೊ ಕೆಲಸ ಮಾಡಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸೇತುವೆ ದಾಟುವಾಗ ಆಯತಪ್ಪಿ ನದಿಗೆ ಬಿದ್ದಿದ್ದ ಇಬ್ಬರ ಶವ ಪತ್ತೆ
Web Stories