ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಜೀ, ಯುವಕರ ಆದರ್ಶ ಪುರುಷ ಸ್ವಾಮಿ ವಿವೇಕಾನಂದ. ಇವ್ರ ಹೆಸರನ್ನ ಹೇಳುವುದಕ್ಕೆ ಹೆಮ್ಮೆ ಆಗುತ್ತೆ. ಆದ್ರೆ ಇಂತಹ ಶ್ರೇಷ್ಠ ನಾಯಕರ ಪ್ರ್ರತಿಮೆಗಳು ಪ್ರತಿಷ್ಠಾಪನೆಯಾಗದೆ ಧೂಳು ಹಿಡಿಯುತ್ತಿವೆ.
Advertisement
ಹೌದು. ಮಹಾತ್ಮ ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮತ್ತಿತರ ಗಣ್ಯರ ಜಯಂತಿಗಳನ್ನ ಸಡಗರದಿಂದ ಆಚರಿಸ್ತೀವಿ. ಒಂದು ದಿನ ಜೈ ಅಂದು ಸುಮ್ಮನಾಗ್ತೀವಿ. ಮತ್ತೆ ಆ ಪ್ರತಿಮೆಗಳು ನೆನಪಾಗೋದೇ ಮುಂದಿನ ವರ್ಷ ಅವ್ರ ಜಯಂತಿ ಬಂದಾಗ. ಇದು ಒಂದೆಡೆಯಾದ್ರೆ ಬೆಂಗಳೂರಿನ ಹೆಬ್ಬಾಳ ಬಳಿ ಇಂತಹ ಪ್ರತಿಮೆಗಳನ್ನ ಮಾಡುವ ಜಾಗವಿದೆ. ಇಲ್ಲಿಗೆ ಬರುವ ಗ್ರಾಹಕರು ಗಣ್ಯರ ಪ್ರತಿಮೆ ಬೇಕು ಅಂತ ಆರ್ಡರ್ ಕೊಟ್ಟು ಹೋಗ್ತಾರೆ. ಆದ್ರೆ ಪ್ರತಿಮೆಗಳನ್ನ ರೆಡಿ ಮಾಡಿ ಅವು ಧೂಳು ಹಿಡೀತಿದ್ರೂ ಇತ್ತ ತಿರುಗಿ ನೋಡೋದಿಲ್ಲ ಎಂದು ಪ್ರತಿಮೆ ತಯಾರಕ ರಮಣ್ ಹೇಳುತ್ತಾರೆ.+
Advertisement
Advertisement
16 ಅಡಿಯ ಅಂಬೇಡ್ಕರ್ ಪ್ರತಿಮೆಯೊಂದನ್ನು ಬೆಂಗಳೂರಿನ ಆನಂದ್ ರಾವ್ ಸರ್ಕಲ್‍ನಲ್ಲಿ ಇಡ್ತೀವಿ ಅಂತ ಆರ್ಡರ್ ಕೊಟ್ಟು ಹೋದವ್ರು ಮತ್ತೆ ತಿರುಗಿ ಬಂದಿಲ್ಲ. ಇದನ್ನ ತಯಾರಿಸಿದ ಕಲಾವಿದನಿಗೆ ಈ ಪ್ರತಿಮೆಗಳನ್ನ ಇಟ್ಟುಕೊಳ್ಳಲು ಸ್ಥಳವಿಲ್ಲ. ಎಲ್ಲೆಂದರಲ್ಲಿ ಇಡುವಂತೆಯೂ ಇಲ್ಲ. ಇವ್ರ ಪ್ರತಿಮೆ ಮಾಡಿದ ನಮಗೆ ಬೆಲೆಯೇ ಇಲ್ವಾ ಅಂತಾ ಕಲಾವಿದ ರಮಣ್ ಪ್ರಶ್ನಿಸುತ್ತಾರೆ.
Advertisement